ಬೆಂಗಳೂರು : ಕೃಷಿ ವಿಶ್ವವಿದ್ಯಾಲಯಗಳಲ್ಲಿ ಗುಣಾತ್ಮಕವಾಗಿ ಕಾರ್ಯಕ್ರಮ ಅನುಷ್ಠಾನಕ್ಕೆ ಕೃಷಿ ಸಚಿವರು ಸೂಚನೆ ನೀಡಿದರು. ವಿಕಾಸ ಸೌಧದ ಸಮಿತಿ ಕೊಠಡಿಯಲ್ಲಿ ಬೆಳಿಗ್ಗೆ 9 ರಿಂದಲೇ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನೆ ನಡೆಸಿ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸೂಚಿಸಿದರು.
ಶೇ 100 ರಷ್ಟು ವಿಶ್ವವಿದ್ಯಾನಿಲಯ ಅನುದಾನ ಇರುವ ಹುದ್ದೆಗಳಿಗೆ ಆರ್ಥಿಕ ಇಲಾಖೆಗೆ ಕೇವಲ ಮಾಹಿತಿ ನೀಡಿ ನೇಮಕಾತಿ ಮಾಡಿಕೊಳ್ಳುಲು ಅನುಕೂಲವಾಗುವಂತೆ ಸೂಕ್ತ ಮಾರ್ಗಸೂಚಿ ಹೊರಡಿಸಬೇಕಿದೆ. ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಸಚಿವಾಲಯದ ನಡುವೆ ಸೂಕ್ತ ಸಮನ್ವಯ ಅಗತ್ಯವಿದೆ ಎಂದು ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ಸಚಿವರು ತಿಳಿಸಿದರು.
ಕೃಷಿ ವಿಶ್ವ ವಿದ್ಯಾನಿಲಯಗಳು ಕೇವಲ ಸಂಶೋಧನೆಗೆ ಸೀಮಿತವಾಗದೆ ಕೃಷಿ ಹಾಗೂ ಕೃಷಿಕರ ಶ್ರೇಯೋಭಿದ್ದಿಗೆ ಅದು ಬಳಕೆಯಾಗಬೇಕು. ಕೃಷಿ ವಿವಿಗಳಿಗೆ ಮುಖ್ಯ ಮಂತ್ರಿ ಹಾಗೂ ಸರ್ಕಾರದ ಹೆಚ್ಚಿನ ನೆರವು ಹಾಗೂ ಪ್ರೋತ್ಸಾಹ ನೀಡುತ್ತಿದೆ. ಅದರ ಫಲ ರೈತರಿಗೆ ವರ್ಗಾವಣೆಯಾಗಬೇಕು ಎಂದರು.
ಐ.ಸಿ..ಎ.ಆರ್ ಮಾರ್ಗ ಸೂಚಿ ಮಾನದಂಡ ಪೂರೈಸುವ ಕೃಷಿ ಕಾಲೇಜು/ಸಂಸ್ಥೆಗಳಿಗೆ ಮಾತ್ರ ಆಯಾಯಾ ಕೃಷಿ ವಿ.ವಿ ವ್ಯಾಪ್ತಿಯಲ್ಲಿ ಅಫಿಲೇಷನ್ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲು ಕೃಷಿ ಸಚಿವರ ಸೂಚನೆ ನೀಡಿದರು. ಡಿಪ್ಲೊಮಾ ಕಾಲೇಜುಪುನರ್ ಸ್ಥಾಪಿಸಲು ಬೇಡಿಕೆ ಹೆಚ್ಚಾಗಿರುವ ಹಿನ್ನಲೆ, ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕಾರ್ಯದರ್ಶಿಗಳಿಗೆ ಸಚಿವರು ನಿರ್ದೇಶನ ನೀಡಿದರು.