ಬೆಂಗಳೂರಲ್ಲಿ ಬಿಜೆಪಿ ಶಾಸಕ ಮುನಿರತ್ನ ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಆರ್ ಆರ್ ನಗರ ಕ್ಷೇತ್ರದಲ್ಲಿ ನಡೆದಿರುವ ಅನ್ಯಾಯವನ್ನು ಖಂಡಿಸುವ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸುತ್ತಿರೋದಾಗಿ ತಿಳಿಸಿದ್ದಾರೆ. ಆರ್ ಆರ್ ನಗರ ಕ್ಷೇತ್ರ ಪ್ರತಿದಿನ 50 ಸಾವಿರ ಮತದಾರರು ಓಡಾಡುವಂತ ಜನಸಂಖ್ಯೆ ಕ್ಷೇತ್ರ. ಯಶವಂತಪುರ ರೈಲ್ವೆ ಸ್ಟೇಷನ್ ಗೆ ಹೋಗಲು ಒಂದು ರಸ್ತೆ ರೆಡಿ ಮಾಡಿದ್ವಿ ಹಾಗೂ ಪಕ್ಕದಲ್ಲೇ ಇರುವ ಹೆರಿಗೆ ಮತ್ತೆ ಕೊವಿಡ್ ಆಸ್ಪತ್ರೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲಿ ಇರುವ ವ್ಯಾಪಾರಸ್ಥರು, ಡಿಕೆ ಸುರೇಶ್ ರನ್ನು ಅಲ್ಲಿಗೆ ಕರೆಸುತ್ತಾರೆ ಅಲ್ಲಿ ದನದ ಮಾಂಸ ಮಾರಾಟ ಮಾಡುವವರು ಆ ರಸ್ತೆ ತೆರವು ಗೊಳಿಸಲು ಮನವಿ ಮಾಡ್ತಾರೆ. ಡಿ ಕೆ ಸುರೇಶ್ ಅವ್ರು ತಪಾಸಣೆ ಮಾಡಿ, ಅದನ್ನು ಕೂಡಲೇ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಡ್ತಾರೆ. ಆದರೆ ಅಧಿಕಾರಿಗಳು ಆ ರಸ್ತೆಯನ್ನು ತೆರವು ಮಾಡೋಕೆ ಆಗಲ್ಲ ಎಂದು ನಿರಾಕರಿಸುತ್ತಾರೆ. ಆ ನಂತರ ಅಲ್ಲಿನ ವ್ಯಾಪಾರಸ್ಥರೇ ರಸ್ತೆ ತೆರವು ಮಾಡಿ, ಅಲ್ಲಿರುವ ಕಬ್ಬಿಣವನ್ನು ಕಳ್ಳತನ ಮಾಡ್ತಾರೆ. ಕಾಂಗ್ರೆಸ್ ಗೆ ವೋಟ್ ಹಾಕ್ತೀವಿ ಅಂತಾ ಆ ರಸ್ತೆ ಹೊಡೆದಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ರು..
ಒಂದು ವೇಳೆ ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಓಟ್ ಹಾಕ್ತೀವಿ ಅಂದರೆ, ವಿಧಾನಸೌಧವನ್ನು ಹೊಡೆದರು ಆಶ್ಚರ್ಯಪಡಬೇಕಿಲ್ಲ. ರಸ್ತೆ ಹೊಡೆದಿರುವ ಫೋಟೋ ಗಳನ್ನು ಕೂಡ ಪ್ರದರ್ಶನ ಮಾಡುವ ಮೂಲಕ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದನದ ಮಾಂಸ ಮಾರಾಟ ಮಾಡುವ ವ್ಯಾಪಾರಸ್ಥರ ಜೊತೆಗೆ ಇರುವ ಕಾಂಗ್ರೆಸ್ ನ ಹನುಮಂತರಾಯಪ್ಪ ಫೋಟೋವನ್ನು ಕೂಡ ಇದೇ ವೇಳೆ ಮುನಿರತ್ನ ಪ್ರದರ್ಶನ ಮಾಡಿದ್ರು.
ಇನ್ನು ಬಿಜೆಪಿ ಕಾರ್ಯಕರ್ತರ ಮನೆಗೆ ರಾತ್ರೋ ರಾತ್ರಿ ಹೋಗೋದು, ಹತ್ತು – ಇಪ್ಪತ್ತು- ಇಪ್ಪತೈದು ಲಕ್ಷ ಕೊಟ್ಟು ಬಲವಂತವಾಗಿ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳೋದು ಮಾಡುತ್ತಿದ್ದಾರೆ. ಕೊನೆಗೆ ಅವರಿಗೆ ಶಾಲು ಹಾಕಿ ಒಂದು ಫೋಟೋ ತೆಗೆಯೋದು ಬೇಡ ಅಂದ್ರು, ದುಡ್ಡು ಅಲ್ಲಿಟ್ಟು ೨೦ ಲಕ್ಷ ಕೊಟ್ಟು ಶಾಲು ಹಾಕ್ತಾರೆ. ಅಂಗವಿಕಲರ ಮನೆಗೆ ಹೋಗ್ತಾರೆ, ಪಾಪ ಆ ಹೆಣ್ಣು ಮಗಳು ಬಿಜೆಪಿ ಕಾರ್ಯಕರ್ತೆ.. ನಮ್ಮ ಕ್ಷೇತ್ರದಲ್ಲಿ ಕುಕ್ಕರ್, ಸೀರೆಗಳು, ದುಡ್ಡನ್ನು ಶೇಖರಣೆ ಮಾಡಿ ಇಡ್ತಿದ್ದಾರೆ ಇದರ ಬಗ್ಗೆ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ. ನಾವು ಅವರನ್ನು ಕೇಳಿದ್ರೆ ಅವರು ಭಯದಲ್ಲಿ ಮಾತಾಡ್ತಿದ್ದಾರೆ
ಇಂತಹ ಅಧಿಕಾರಿಗಳು ಬೇಡ ಎಂದು ಆಯೋಗಕ್ಕೆ ಪತ್ರ ಬರೆದ್ರು ಅವರನ್ನು ವರ್ಗಾವಣೆ ಮಾಡುತ್ತಿಲ್ಲ,. ಇನ್ನು ಡಾ ಮಂಜುನಾಥ್ ಪ್ರಾಮಾಣಿಕ ವ್ಯಕ್ತಿ. ಅಂತಹ ವ್ಯಕ್ತಿ ನಮ್ಮ ಗ್ರಾಮಾಂತರಕ್ಕೆ ಅಭ್ಯರ್ಥಿ ಯಾಗಿ ಸಿಕ್ಕಿದ್ದಾರೆ. ಒಳ್ಳೆಯ ರೀತಿಯ ಚುನಾವಣೆ ಮಾಡೋದನ್ನು ಬಿಟ್ಟು ೪ ಲಕ್ಷ ಕುಕ್ಕರ್ ಗಳು ತಯಾರಿಗಿದ್ದಾವೆ. ಈ ಚುನಾವಣೆ ಪಾರದರ್ಶಕ ವಾಗಿ ನಡೆಯಬೇಕು ಅಂದರೆ, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇಲ್ಲವಾದಲ್ಲಿ ಆರ್ ಆರ್ನಗರ ಕ್ಷೇತ್ರವನ್ನು ಡಿಜೆ ಹಳ್ಳಿ – ಕೆಜೆ ಹಳ್ಳಿ ಪ್ರಕರಣದಂತೆ ಎಷ್ಟು ಹೆಣಗಳನ್ನು ಬೀಳುತ್ತವೋ ಗೊತ್ತಿಲ್ಲ ಎಂದು ಮುನಿರತ್ನ ತಿಳಿಸಿದ್ರು.