ಪುರಾಣ ಇತಿಹಾಸದಲ್ಲಿ ಮಹಿಳೆಯರು ಮಾಡಿದ ಸಾಧನೆ ಈಗಿನ ಮಹಿಳೆಯರು ಸಾಧನೆ ಮಾಡಿದ್ದಾರೆ. ಹೌದು. ಇತ್ತಿಚೆಗೆ ಮಹಿಳೆಯರು ಎಲ್ಲ ರಂಗದಲ್ಲೂ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಪ್ರೋತ್ಸಾಹಿಸಲು ಸ್ತ್ರೀಸಾಮರ್ಥ್ಯ, ಸ್ತ್ರೀ ಶಕ್ತಿ ಯೋಜನೆಗಳನ್ನು ಜಾರಿಗೆ ಬಂದಿದೆ. ಅದ್ರ ಜೊತೆಗೆ ಬ್ಯಾಂಕ್ ಐಟಿ ಬಿಟಿಯಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರದಲ್ಲೂ ಮಹಿಳೆಯೇ ಮುಂದು.. ಅದ್ರೂ ಮಹಾಲಕ್ಷ್ಮಿ ಲೇಔಟ್ ವಿಧಾನಸಬಾ ಕ್ಷೇತ್ರದ ಮಹಿಳೆಯರಂತೂ ಫುಲ್ ಆ್ಯಕ್ಟಿವ್ ಆಗಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಶಂಕರಮಠದ ಸ್ವಾಮಿ ವಿವೇಕನಂದ ಆಟದ ಮೈದಾನದಲ್ಲಿ ನಿನ್ನೆ 2024ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ, ಬೆಂಗಳೂರು ಉತ್ತರ ಲೋಕಸಬಾ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಾಸಕ ಬೈರತಿ ಬಸವರಾಜ್, ಮಾಜಿ ಸಚಿವರು ಹಾಗೂ ಶಾಸಕರಾದ ಕೆ.ಗೋಪಾಲಯ್ಯ, ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ ಭಾಗಿಯಾಗಿದ್ರು. ಗೋಪಾಲಯ್ಯನವರು ತಮ್ಮ ಕ್ಷೇತ್ರದಲ್ಲಿ ಪ್ರತಿ ವರ್ಷ ದೊಡ್ಡ ಮಟ್ಟದಲ್ಲಿ ಮಹಿಳಾ ದಿನಾಚರಣೆಯನ್ನ ಆಚರಣೆ ಮಾಡ್ತಾರೆ. ಈ ಬಾರಿ ಕೂಡ ಅದೇ ರೀತಿಯಾದ ಒಂದ ಕಾರ್ಯಕ್ರಮ ಮಾಡಿ, ಕ್ಷೇತ್ರದ ಮಹಿಳೆಯರಿಗೆ ಮತ್ತಷ್ಟು ಪ್ರೋತ್ಸಾಹ ತುಂಬಿದ್ದಾರೆ. ಕ್ಷೇತ್ರದ ಮಹಿಳೆರಿಗಾಗಿ, ಸಂಬಲೀಕರಣಕ್ಕಾಗಿ 37 ಸಂಘಗಳನ್ನ ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಂದ್ರೆ 50ಕ್ಕೂ ಹೆಚ್ಚು ಸಂಘಗಳನ್ನ ಕಟ್ಟುವ ಗುರಿ ಇಟ್ಟುಕೊಂಡಿದ್ದಾರೆ.
ಶಾಸಕ ಗೋಪಾಲಯ್ಯ ಈ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಕೇವಲ ಮಹಿಳ ಸಂಬಲೀಕರಣ ಮಾತ್ರವಲ್ಲ, ಕ್ಷೇತ್ರದ ಒಳಿತಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿರೋ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡ್ತಿದ್ದಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಇತ್ತು. ಸುಮಾರು ನಲವತ್ತೈದು ಶಿಕ್ಷಕರಿಗೆ ತಾವೇ ಸಂಬಳ ಕೊಟ್ಟು ಎಲ್ಲ ಮಕ್ಕಳಿಗೆ ಶಿಕ್ಷಣ ಸಿಗುವ ಕೆಲಸ ಮಾಡಿದ್ರು. ಒಟ್ನಲ್ಲಿ ಶಾಸಕ ಗೋಪಾಲಯ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಿದ್ದಾರೆ. ಮುಂದೆಯೂ ನಿಮ್ಮ ಸೇವೆಗೆ ಅವಕಾಶ ನೀಡಬೇಕು ಅಂತಾಲೂ ಮನವಿ ಮಾಡಿಕೊಂಡಿದ್ದಾರೆ.