ಬೆಂಗಳೂರು : ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೆ ಇರುತ್ತಾರೆ ಎಂಬ ಗಾದೆ ಮಾತನ್ನ ಕೇಳಿದಿವಿ ಅಂತಹದ್ದೆ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಡಿಯೋದಲ್ಲಿ ಕಂತೆ ಕಂತೆ ಹಣ ತೋರಿಸಿ ವಂಚಿಸುತ್ತಿದ್ದವನನ್ನ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚಕ ಕಿಶನ್ ಅಲಿಯಾಸ್ ಮಾಕಳಿ ಕಿಶನ್ ಬಂಧಿತ ಆರೋಪಿ. ಈ ಆರೋಪಿ ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕರಿಗೆ ಬಲೆ ಬೀಸಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ. ನೂರಾರು ಜನ ಇತನನ್ನು ನಂಬಿ ಹಣ ಕಳೆದುಕೊಂಡಿದ್ದಾರೆ.
ವಂಚಕ ಪ್ರಾಫಿಟ್ ಕೊಡ್ತೀನಿ ಅಂಥ ಸಾಕಷ್ಟು ಜನರಿಗೆ ಮೋಸ ಮಾಡುತ್ತಿದ್ದ. ಗುಣನಿಧಿ ಎಂಬುವವರ ದೂರಿನ ಮೇರೆಗೆ ಆರೋಪಿಯ ವಿರುದ್ಧ FIR ದಾಖಲಾಗಿದೆ. ಆರೋಪಿ 15 ಲಕ್ಷದ 15 ಸಾವಿರ ಹಣ ಹೂಡಿಕೆ ಮಾಡಿಸಿ ಮೋಸ ಮಾಡಿದ್ದಾನೆ. ಗುಣನಿಧಿಗೆ ಗೌತಮ್ ಎಂಬ ಸ್ನೇಹಿತನಿಂದ ಆರೋಪಿ ಕಿಶನ್ ಪರಿಚಯವಾಗಿದ್ದ, ನಂತರ ಕಿಶನ್ ಲೋನ್ಗಾಗಿ ವೆಂಕಟೇಶ್ನನ್ನ ಸಂಪರ್ಕ ಮಾಡುವಂತೆ ತಿಳಿಸಿದ್ದ.
ಬ್ರೋಕರ್ ವೆಂಕಟೇಶ್ನನ್ನು ದೂರುದಾರ ಸಂಪರ್ಕ ಮಾಡಿದ್ದು, ಎಲ್ಲಾ ದಾಖಲೆ ಪಡೆದು ಬ್ಯಾಂಕ್ನಿಂದ ಲೋನ್ ಮಂಜೂರಾಗಿದೆ. ಲೋನ್ EMI ತಾನೇ ಪಾವತಿ ಮಾಡುವೆ ಎಂದು ಕಿಶನ್ಗೆ ನಂಬಿಸಿದ್ದ. ಮೊದಲ 5 ತಿಂಗಳ EMI ಪಾವತಿ ಮಾಡಿ ಎಂದು ನಂಬಿಸ್ತಿದ್ದ. ಒಂದು ವರ್ಷಕ್ಕೆ ಲೋನ್ ಕ್ಲಿಯರ್ ಮಾಡಿ ಪ್ರಾಫಿಟ್ ಕೊಡ್ತೀವಿ ಅಂತಿದ್ದ ವಂಚಕ ಕಿಶನ್
ಇದೇ ರೀತಿ ನೂರಾರು ಜನರನ್ನು ನಂಬಿಸಿ ವಂಚನೆ ಮಾಡಿದ್ದಾನೆ. ಸುಮಾರು 80-100 ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿರುವ ವಂಚಕ ಕಿಶನ್ಗೆ ಹಣ ವಾಪಸ್ ಕೇಳಿದರೆ ಗನ್ ತೋರಿಸಿ ಬೆದರಿಸುತ್ತಿರುವ ಆರೋಪ ಕೇಳಿ ಬಂದಿದೆ. ಹೂಡಿಕೆದಾರರು ಜೀವ ಭಯದಿಂದ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವಂಚನೆಗೊಳಗಾದವರು ಬಂದು ದೂರು ನೀಡುವಂತೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿಗೆ ಮನವಿ ಮಾಡಿದ್ದಾರೆ.