Freedom TV
ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ಮಹೋತ್ಸವ ರದ್ದು

ಬೆಂಗಳೂರು : ಕರಗ ಹೊರುವ ವಿಚಾರಕ್ಕೆ ಸಂಬಂಧಿಸಿದಂತೆ ತಿಗಳ ಸಮುದಾಯದ ಮೂರು ಗುಂಪುಗಳ ನಡುವೆ ಜಿದ್ದಾಹಿದ್ದಿ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರಣಕ್ಕೆ ಕರಗ ಮಹೋತ್ಸವವನ್ನು ರದ್ದು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆಯಲ್ಲಿ ನಾಳೆ ನಡೆಯಬೇಕಿದ್ದ ಇತಿಹಾಸ ಪ್ರಸಿದ್ದ ಬೂದಿಗೆರೆ ಶ್ರೀ ದ್ರೌಪದಮ್ಮ ದೇವಿ ಕರಗ ಮಹೋತ್ಸವ ರದ್ದಾಗಿದೆ. ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ಹೊರುವ ವಿಚಾರವಾಗಿ ತಿಗಳ ಸಮುದಾಯದ ಮೂರು ಗುಂಪುಗಳ ನಡುವೆ ಕಿತ್ತಾಟ ನಡೆದಿದ್ದು, ಇದೇ ಕಾರಣಕ್ಕೆ ಕರಗ ಮಹೋತ್ಸವವನ್ನು ರದ್ದು ಮಾಡಲಾಗಿದೆ.
ಇನ್ನು ಕರಗ ವಿಚಾರ ಕೋರ್ಟ್ ಮೇಟ್ಟಿಲೇರಿದ್ದು, ಹೈಕೋರ್ಟ್ನಲ್ಲಿ ಕರಗ ಕಿತ್ತಾಟ ಪ್ರಕರಣ ಇತ್ಯಾರ್ಥವಾಗಿಲ್ಲ. ಮೇ 27ಕ್ಕೆ ವಿಚಾರಣೆಯನ್ನು ಹೈ ಕೋರ್ಟ್ ಮುಂದೂಡಿದೆ, ಆದರೆ ಕರಗ ಮಾರ್ಚ್ 25 ರಂದು ನಡೆಬೇಕಿತ್ತು. ಪ್ರಕರಣ ಇತ್ಯರ್ಥವಾಗದ ಕಾರಣ ಆಚರಣೆ ರದ್ದಾಗಿದೆ.



