ಹಲಸೂರ್ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಣ್ಣಗಲ್ಲಿಯಲ್ಲಿ ಎರಡು ಯುವಕರ ತಂಡ ಹಾಡಿನ ವಿಚಾರಕ್ಕೆ ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದೆ.
ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಹೆಚ್ಚಿನ ಸಮಯವನ್ನ ಪ್ರಾರ್ಥನೆಯಲ್ಲಿ ಕಳೆಯುತ್ತಾರೆ, ನಿನ್ನೆ ಸಂಜೆ ಹಲಸೂರ್ ಠಾಣಾ ವ್ಯಾಪ್ತಿಯ ಸಿದ್ದಣ್ಣ ಗಲ್ಲಿಯಲ್ಲಿ ಮುಸ್ಲಿಮರ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಅಲ್ಲೇ ಅಂಗಡಿ ಇಟ್ಟುಕೊಂಡಿದ್ದ ಮುಖೇಶ್ ಎಂಬಾತ ವಿಪರೀತ ಸೌಂಡ್ ನೀಡಿ ಹನುಮನ ಗಾನ ಹಾಕಿಕೊಂಡಿದ್ದ ಎನ್ನಲಾಗಿದೆ. ಅ ವೇಳೆ ಅಲ್ಲಿಗೆ ಬಂದ ಕೆಲ ಯುವಕರು ಪ್ರಾರ್ಥನೆ ನಡೆಯುತ್ತಿದೆ ಹಾಡಿನ ಸೌಂಡ್ ಕಮ್ಮಿ ಮಾಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಅದಕ್ಕೆ ಒಪ್ಪಿಕೊಳ್ಳದ ಮುಖೇಶ್ ಹಾಡಿನ ಸೌಂಡ್ ಅನ್ನ ಮತ್ತಷ್ಟು ಹೆಚ್ಚು ಮಾಡಿದ ಪರಿಣಾಮ ಯುವಕರನ್ನ ರೊಚ್ಚಿಗೇಳಿಸಿದೆ. ಯುವಕರು ಗುಂಪು ಏಕಾಏಕಿ ನುಗ್ಗಿ ಮುಖೇಶ್ ಮೇಲೆ ಮುಗಿಬಿದ್ದಿದ್ದಾರೆ. ಸ್ಥಳದಲ್ಲಿ ಸಂಘರ್ಷ ವಾತಾವರಣ ನಿರ್ಮಾಣವಾಗಲು ಅವಕಾಶ ಕೊಡದ ಕಾರಣ, ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ,ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಐಪಿಸಿ ಸೆಕ್ಷನ್ 506, 504 , 149 , 307, 323 ಹಾಗೂ 324 ರ ಅಡಿ ಪ್ರಕರಣ ದಾಖಲಾಗಿದ್ದು . ಕೆಲ ಯುವಕರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ.