Thursday, May 1, 2025
25.2 C
Bengaluru
LIVE
ಮನೆUncategorizedಪಕ್ಕದ ಮನೆಯಲ್ಲಿ ಸರಸದ ಸೌಂಡು: ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್

ಪಕ್ಕದ ಮನೆಯಲ್ಲಿ ಸರಸದ ಸೌಂಡು: ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್

ಬೆಂಗಳೂರು ನಗರದಲ್ಲಿ ವಿಚಿತ್ರ ದೂರೊಂದು ದಾಖಲಾಗಿದೆ. ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ವಿಚಿತ್ರ ಕೇಸ್ ದಾಖಲಾಗಿರುವುದು ಗಿರಿನಗರ ಪೊಲೀಸ್ ಠಾಣೆಯಲ್ಲಿ, ಅವಲಹಳ್ಳಿ ಏರಿಯಾದಲ್ಲಿ ವಾಸವಿರುವ 44 ವರ್ಷದ ಮಹಿಳೆಯೊಬ್ಬರು ಈ ದೂರು ನೀಡಿದ್ದು, ಪೊಲೀಸರು ದೂರು ಸ್ವೀಕರಿಸಿ ಎಫ್ಐಆರ್ ದಾಖಲು ಮಾಡಿದ್ದಾರೆ.

ಮಹಿಳೆ ವಾಸವಿದ್ದ ಮನೆ ಪಕ್ಕದಲ್ಲಿ ದಂಪತಿ ವಾಸವಿದ್ದಾರೆ. ಮಹಿಳೆ ಇದ್ದ ಮನೆ ಬಾಗಿಲಿಗೆ ಪಕ್ಕದ ಮನೆ ಬೆಡ್ ರೂಂ ಇದೆ. ಪಕ್ಕದ ಮನೆ ದಂಪತಿ ಸರಸ ಸಲ್ಲಾಪದಿಂದ ಮಹಿಳೆಗೆ ವಿಪರೀತ ಕಿರಿಕಿರಿಯಾಗಿದೆ. ಮಾತ್ರವಲ್ಲ ಮನೆಯ ಕಿಟಕಿ ಬಾಗಿಲು ತೆರೆದಿಟ್ಟು ವಿಕೃತ ವರ್ತನೆ ಮಾಡಿರುವ ಆರೋಪ ಕೂಡ ದಂಪತಿ ಮೇಲಿದೆ.

ಪಕ್ಕದ ಮನೆ ದಂಪತಿ ವರ್ತನೆಯಿಂದ ಮಹಿಳೆ ಕುಟುಂಬಕ್ಕೆ ಕಿರಿಕಿರಿಯಾಗಿ ಕಿಟಕಿ ಬಾಗಿಲು ಹಾಕಿಕೊಳ್ಳಿ ಅಂದ್ರೆ ಬೆದರಿಕೆ ಹಾಕುತ್ತಿದ್ದರಂತೆ. ಮಾತ್ರವಲ್ಲ ಮಹಿಳೆಯನ್ನು ಅತ್ಯಾಚಾರ, ಕೊಲೆ ಮಾಡುವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಆರೋಪಿಗೆ ಮನೆ ಮಾಲೀಕ ಮತ್ತು ಆತನ ಮಗ ಕೂಡ ಸಾಥ್ ನೀಡಿದ್ದು, ಹುಡುಗರನ್ನು ಕರೆಸಿ ಮನೆ ಮಾಲೀಕನಿಂದ ಮಹಿಳೆಗೆ ಬೆದರಿಕೆ ಹಾಕಿದ್ದಾರಂತೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆ ಮಾಲೀಕ ಚಿಕ್ಕಣ್ಣ, ಆತನ ಪುತ್ರ ಮಂಜುನಾಥ್, ಪಕ್ಕದ ಮನೆ ವ್ಯಕ್ತಿ ವಿರುದ್ದ ದೂರು ದಾಖಲು ಮಾಡಲಾಗಿದ್ದು, ದೂರು ಸ್ವೀಕರಿಸಿದ ಪೊಲೀಸರು IPC ಸೆಕ್ಷನ್ 504, 506, 509, 34ರಡಿ FIR ದಾಖಲು ಮಾಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments