ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಎಲ್ಲೆಡೆ ಭರ್ಜರಿ ತಯಾರಿ ನಡೆಯುತ್ತಿದೆ. ಲೋಕಸಭೆ ಸ್ಪರ್ಧೆ ಬಗ್ಗೆ ಗೀತಾ ಶಿವರಾಜ್ಕುಮಾರ್ ಪ್ರತಿಕ್ರಿಯೆ, ಶಿವಮೊಗ್ಗದಲ್ಲಿ ನಾನು ಹತ್ತು ವರ್ಷದ ಹಿಂದೆ ಎಲೆಕ್ಷನ್ ಫೇಸ್ ಮಾಡಿದ್ದೆ. ನಾನು ಏನೇ ಮಾಡಿದ್ರು ಸಹೋದರನಿಂದಲೇ ಕಲಿತಿರೋದು. ಲಾಸ್ಟ್ ಎಲೆಕ್ಷನ್ ನಲ್ಲಿ ಕೆಲವ್ರನ್ನ ಹೆದರಿಸೇ ಬಂದಿದ್ದು, ನನಗೇನು ಭಯವಿಲ್ಲ ಎಂದು ಹೇಳಿದರು.
ನನಗೆ ನಿರ್ಮಾಪಕರ ಬೆಂಬಲ ನೋಡಿ ತುಂಬಾ ಖುಷಿ ಆಯ್ತು. ಈ ಥರ ಆಗ್ತಾ ಇರೋದು ಇದೇ ಮೊದಲನೇ ಬಾರಿ ಎಂದ ಅವರು, ಜನರಿಗೆ ಧ್ವನಿ ಆಗಬೇಕು ಅಂದ್ರೆ ಖಂಡಿತ ನಾನು ಮಾಡ್ತಿನಿ. ಮಹಿಳೆಯರ ಪರವಾಗಿ ಧ್ವನಿ ಎತ್ತೋದಾಗಿ ಗೀತಾ ಶಿವರಾಜ್ಕುಮಾರ್ ನುಡಿದರು.