ರಾಜಕೀಯರಾಜ್ಯಸುದ್ದಿ

14 ಕ್ಷೇತ್ರಗಳಿಗೆ ನಾಮಿನೇಷನ್ ಶುರು.. ರೆಡಿಯಾದ್ರಾ ಡಿ.ಕೆ ಸುರೇಶ್..?

ಬೆಂಗಳೂರು ಗ್ರಾಮಾಂತರ ಈ ಬಾರಿ ಇಡೀ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರ.. ಗೌಡ್ರು-ಡಿಕೆಶಿ ಕುಟುಂಬದ ನಡುವೆ ಸಂಗ್ರಾಮಕ್ಕೆ ವೇದಿಕೆ ಆಗ್ತಿದೆ.. ಗೌಡ್ರ ಕುಟುಂಬಕ್ಕೆ ಬಿಜೆಪಿಯ ಬಲ ಸೇರಿದೆ.. ಹೀಗಾಗಿ ಎರಡು ಪಕ್ಷಗಳು ಅನ್ನೋದಕ್ಕಿಂತ 2 ಕುಟುಂಬಗಳ ಮದಗಜ ಕಾಳಗಕ್ಕೆ ಸಾಕ್ಷಿ ಬರೆಯಲಿದೆ.. ಇವತ್ತೇ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಉಮೇದುವಾರಿಕೆ ಸಲ್ಲಿಸಲಿದ್ದಾರೆ.. ಇವತ್ತು ಇಡೀ ಕಾಂಗ್ರೆಸ್ ದಂಡೇ ರಾಮನಗರಕ್ಕೆ ಲಗ್ಗೆ ಹಾಕಲಿದೆ.. ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವರು ಸಾಥ್ ನೀಡ್ತಿದ್ದಾರೆ.. ಬೆಳಗ್ಗೆ ನಗರದಲ್ಲಿ ಱಲಿ, ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ನಡೆಯಲಿದೆ..

ಬಳಿಕ ಬಹಿರಂಗ ಸಭೆ ಆಯೋಜನೆ ಆಗಿದೆ.. ಇದಕ್ಕೂ ಮುನ್ನ ಕನಕಪುರ ಕೆಂಕ್ಕೆರಮ್ಮ, ಶಕ್ತಿ ದೇವತೆ ಕಬ್ಬಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಕೆ ಆಗಲಿದೆ.ಇವತ್ತು ಇಡೀ ಕಾಂಗ್ರೆಸ್ ದಂಡೇ ರಾಮನಗರಕ್ಕೆ ಲಗ್ಗೆ ಹಾಕಲಿದೆ.. ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವರು ಸಾಥ್ ನೀಡ್ತಿದ್ದಾರೆ.. ಬೆಳಗ್ಗೆ ನಗರದಲ್ಲಿ ಱಲಿ, ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ನಡೆಯಲಿದೆ.. ಬಳಿಕ ಬಹಿರಂಗ ಸಭೆ ಆಯೋಜನೆ ಆಗಿದೆ.. ಇದಕ್ಕೂ ಮುನ್ನ ಕನಕಪುರ ಕೆಂಕ್ಕೆರಮ್ಮ, ಶಕ್ತಿ ದೇವತೆ ಕಬ್ಬಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಕೆ ಆಗಲಿದೆ.

Comments (0)

Your email address will not be published. Required fields are marked *

Back to top button