ಬೆಂಗಳೂರು : ಲೋಕಸಭೆ ಎಲೆಕ್ಷನ್ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಇಂದು ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದಾರೆ. ನಾಳೆ ದೆಹಲಿಯಲ್ಲಿ ಸಿಇಸಿ ಸಭೆ ಕರೆದಿದ್ದು, ಸಿಎಂ ಡಿಸಿಎಂ ಹೊರಟಿದ್ದು, ನಾಳೆಯ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುವುದು. ಈಗಾಗ್ಲೇ 2-3 ಬಾರಿ ಸ್ಕ್ರೀನಿಂಗ್ ಕಮಿಟಿ ನಡೆದಿದು, ಸಿಂಗಲ್ ನೇಮ್ ಅಭ್ಯರ್ಥಿಗಳ ಆಯ್ಕೆ ಆಗಿ, ಹತ್ತು ದಿನದಲ್ಲಿ ಮೊದಲ ಪಟ್ಟಿ ರಿಲೀಸ್ ಆಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಎನ್ಐಎ ದಾಳಿ ವಿಚಾರವಾಗಿ ಮಾತನಾಡಿದ ಅವರು, ಎನ್ ಐಎ ದಾಳಿ ಗೊತ್ತಿಲ್ಲ. ಈ ಬಗ್ಗೆ ಯಾರೂ ಹೇಳಿಲ್ವಲ್ಲಾ. ಇವತ್ತು ಎನ್ ಐಎ ಅಧಿಕಾರಿಗಳು ಬರಬಹುದು. ಹಾಗೆ ಬಾಂಬ್ ಸ್ಫೋಟ ಬಗ್ಗೆ ಇನ್ನೂ ಮಾಹಿತಿ ಕೇಳಬಹುದು. ಈ ವಿಚಾರವನ್ನ ಬಹಳ ಗಂಭೀರವಾಗಿ ತೆಗೆದುಕೊಂಡು, ಗುಮಾನಿ ಇರೋರನ್ನ ಅರೆಸ್ಟ್ ಮಾಡೋದಾಗಿ ಮಾಹಿತಿ ನೀಡಿದ್ದಾರೆ. ಇನ್ನೂ ಪಾಕ್ ಪರ ಘೋಷಣೆ ವಿಚಾರ ಬಗ್ಗೆಯೂ ಸ್ಪಷ್ಟಣೆ ನೀಡಿದ್ದು, ಎಫ್ ಎಸ್ ಎಲ್ ರಿಪೋರ್ಟ್ ಮೇಲೆ ಮುಲಾಜಿಲ್ಲದೇ ಕ್ರಮ ಅಂತಾ ಹೇಳಲಾಗಿತ್ತು, ಅದರ ಪ್ರಕಾರವೆ ಕ್ರಮ ಕೈಗೊಂಡಿದ್ದೇವೆ ಎಂದರು.