ಸಿಲಿಂಡರ್ ಶೇಖರಿಸಿಟ್ಟಿದ್ದ ಕೊಠಡಿಯಲ್ಲಿ ಸಿಲಿಂಡರ್ಗಳು ಸ್ಪೋಟಗೊಂಡಿದ್ದು, ಒಮ್ಮೆಲೇ ಸ್ಫೋಟದಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸ್ಪೋಟದಿಂದ ಐದಾರು ಸಿಲಿಂಡರ್ಗಳು ಆಕಾಶದೆತ್ತರಕ್ಕೆ ಹಾರಿದ ಘಟನೆ ಬೆಂಗಳೂರಿನ ಬಿದರಹಳ್ಳಿಯಲ್ಲಿ ನಡೆದಿದೆ.
ಮುನಿಸ್ವಾಮಪ್ಪ ಎಂಬುವರಿಗೆ ಸೇರಿದ ಜಾಗದಲ್ಲಿ ಶಿವಣ್ಣ ಎಂಬುವವರು ಸಿಲಿಂಡರ್ ಸರ್ವಿಸ್ ಆರಂಭಿಸಿದ್ದರು. ಯಾವುದೇ ಪರವಾನಿಗೆ ಇಲ್ಲದೆ ೧೦ಕ್ಕೂ ಹೆಚ್ಚು ವಿವಿಧ ಕಂಪನಿಗಳ ಸಿಲಿಂಡರ್ ಶೇಖರಣೆ ಮಾಡಿದ್ದರು. ಸಿಲಿಂಡರ್ ಸ್ಫೋಟದಿಂದ ವ್ಯಕ್ತಿಯೊರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಳೆದ ಬುಧವಾರವಷ್ಟೇ ಸಿಲಿಂಡರ್ ಗೋಡೋನ್ ಆರಂಭಿಸಿದ ಮಾಲೀಕ. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆಯದೆ ಅಕ್ರಮವಾಗಿ ಸಿಲಿಂಡರ್ ಗಳ ಶೇಖರಣೆ ಮಾಡಿದ್ದ. ಹೋಟೆಲ್ ಮಾಡುವ ಉದ್ದೇಶದಿಂದ ಜಾಗ ಪಡೆದು ಅಕ್ರಮ ಗ್ಯಾಸ್ ರಿಫೀಲಿಂಗ್ ಮಾಡುತ್ತಿರುವ ಬಗ್ಗೆ ಸ್ಥಳೀಯರು ಆರೋಪ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಂದ ಕಾರ್ಯಚಾರಣೆ ನಡೆಸಿದ್ರು.