ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದೆ. ಬಿರು ಬಿಸಿಲು ಜನರ ನೆತ್ತಿ ಸುಡುತ್ತಿರುವ ಸಮಯದಲ್ಲೇ, ಬೆಂಗಳೂರಿನಲ್ಲಿ ವಿದ್ಯುತ್ ಬಳಕೆಯಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಅತಿ ಹೆಚ್ಚು ಕರೆಂಟ್ ಬಳಕೆಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಬೇಸಿಗೆ ಆರಂಭದಲ್ಲೇ ಲೋಡ್ ಶೆಡ್ಡಿಂಗ್ ಭೂತ ವಕ್ಕರಿಸುವ ಸಾಧ್ಯತೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು ಆದ್ರೆ, ಈ ಭಾರಿ ವಿದ್ಯುತ್ ಬೇಡಿಕೆ ಹೆಚ್ಚಿದ್ದು ರಾಜ್ಯದಲ್ಲಿ ಕಗ್ಗತ್ತಲು ಎದುರಿಸುವ ಆತಂಕ ಎದುರಾಗಿದೆ.
ಇನ್ನು…ರಣ ಬಿಸಿಲಿಗೆ ಸಿಲಿಕಾನ್ ಸಿಟಿ ಜನರು ಸೊರಗಿ ಹೋಗ್ತಿದ್ದಾರೆ. ಅದ್ರಲ್ಲೂ ಈ ಬಾರಿ ಬೇಸಿಗೆ ಆರಂಭದಲ್ಲಿ ಬಿಸಿಲಿನ ಧಗೆ ಹೆಚ್ಚಾಗಿ ಕಾಡ್ತಿದೆ. ಜನರು ಬಿರು ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಫ್ಯಾನ್, ಏಸಿ ಕೂಲರ್ ಮೊರೆ ಹೋಗಿದ್ದಾರೆ. ಇದರಿಂದ ವಿದ್ಯುತ್ ಬಳಕೆಯಲ್ಲಿ ಬೆಂಗಳೂರು ಜನ ಹೊಸ ದಾಖಲೆ ಮಾಡಿದ್ದಾರೆ.ಇದರಿಂದ ಲೋಡ್ ಶೆಡ್ಡಿಂಗ್‌ನ ಆತಂಕ ಹುಟ್ಟಿಸಿದೆ.
ಹೌದು..ಬೇಸಿಗೆ ಆರಂಭದಲ್ಲೇ ರಾಜ್ಯಕ್ಕೆ ಕತ್ತಲು ಆವರಿಸುವ ಆತಂಕ ಶುರುವಾಗಿದೆ.ವಿದ್ಯುತ್ ಸಮಸ್ಯೆಯಿಂದ ಬೆಂಗಳೂರಿನಲ್ಲೇ ಕಗ್ಗತ್ತಲು ಕಾಡುವ ಭೀತಿ ಎದುರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಇಂಧನ ಇಲಾಖೆಗೆ ಬಾರಿ ಸವಾಲು ಕಾಡುತ್ತಿದೆ. ಬಿಸಿಲಿನ ಹಬೆಯಿಂದ ಬೆಂದಿರುವ ಜನರು ಫ್ಯಾನ್, ಏರ್ ಕಂಡಿಷನ್, ಏರ್ ಕೂಲರ್ ಬಳಸುವುದು ಹೆಚ್ಚಾಗಿದೆ. ಇದರಿಂದ ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆಯ ವಿದ್ಯುತ್ ಬಳಕೆಯಾಗಿದೆ. ಈ ವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ 6500- ರಿಂದ 7000 ಮೆಗಾವ್ಯಾಟ್ ವಿದ್ಯುತ್ ಬಳಕೆ ಯಾಗುತ್ತಿತ್ತು. ಆದರೆ ಮಾರ್ಚ್ ಆರಂಭದಿಂದಲೇ 9ಸಾವಿರ ಮೆಗಾವ್ಯಾಟ್ ಸನಿಹಕೆ ಬಂದಿದೆ.
ಹೀಗಾಗಿ ವಿದ್ಯುತ್ ಬೇಡಿಕೆ ಬಗ್ಗೆ ತಲೆಕೆಡಿಸಿಕೊಡಿರುವ ಇಂಧನ ಇಲಾಖೆ,ಲೋಡ್ ಶೆಡ್ಡಿಂಗ್ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.