Wednesday, April 30, 2025
24.6 C
Bengaluru
LIVE
ಮನೆರಾಜಕೀಯಹಾನಗಲ್​ ಗ್ಯಾಂಗ್​​ರೇಪ್​ ಪ್ರಕರಣ ; ಸಂತ್ರಸ್ತೆಯ ಭೇಟಿಯಾಗುತ್ತಾರಾ ಸಿಎಂ ಸಿದ್ದರಾಮಯ್ಯ?

ಹಾನಗಲ್​ ಗ್ಯಾಂಗ್​​ರೇಪ್​ ಪ್ರಕರಣ ; ಸಂತ್ರಸ್ತೆಯ ಭೇಟಿಯಾಗುತ್ತಾರಾ ಸಿಎಂ ಸಿದ್ದರಾಮಯ್ಯ?

ಬೆಂಗಳೂರು : ಹಾವೇರಿಯ ಹಾನಗಲ್​ ಗ್ಯಾಂಗ್​​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸರ್ಕಾರವೇ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಈ ಆರೋಪದ ಬೆನ್ನಲೆ ಇಂದು ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಸಂತ್ರಸ್ತೆಯನ್ನು ಸಿಎಂ ಭೇಟಿ ಮಾಡುತ್ತಾರಾ ಎಂಬ ಕುತೂಹಲ ಮೂಡಿದೆ.

ಹಾನಗಲ್​ನಲ್ಲಿ ನಡೆದಿದ್ದ ಗ್ಯಾಂಗ್​​ರೇಪ್​ ಪ್ರಕರಣ ಸಂಪೂರ್ಣ ರಾಜಕೀಯಕ್ಕೆ ತಿರುಗಿದೆ.  ಈ ಘಟನೆ ಖಂಡಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ, ಬಿ.ವೈ ವಿಜಯೇಂದ್ರ ಹಾಗೂ ಬಿಜೆಪಿ ಮಹಿಳಾ ಘಟಕ ಭಾನುವಾರ ಸಾಂತ್ವನ ಕೇಂದ್ರಕ್ಕೆ ಬೇಟಿ ಮಾಡಲು ಪ್ಲಾನ್​ ಮಾಡಿತ್ತು. ಆದ್ರೆ ಶನಿವಾರ ರಾತ್ರಿಯೇ ಬ್ಯಾಡಗಿ ಕಾಂಗ್ರೆಸ್​​ ಶಾಸಕ ಬಸವರಾಜು ಶಿವಣ್ಣನವರ್​​ ನೇತೃತ್ವದಲ್ಲಿ ಸಾಂತ್ವನ ಕೇಂದ್ರಕ್ಕೆ ಹೋಗಿದ್ದ ಕಾಂಗ್ರೆಸ್​ ನಾಯಕರು, ಸಂತ್ರಸ್ತೆಯನ್ನು ಸ್ಥಳಾಂತರ ಮಾಡಲು ಮುಂದಾಗಿದ್ದರು. ಆಗ ಹೈಡ್ರಾಮಾ ನಡೆದಿದ್ದರಿಂದ ಭಾನುವಾರ ಬೆಳಗ್ಗೆ ಸಂತ್ರಸ್ತೆಯನ್ನು ಶಿರಸಿಗೆ ಸ್ಥಳಾಂತರ ಮಾಡಿದ್ದಾರೆ.

ಇನ್ನು ಬಿಜೆಪಿ ನಿಯೋಗ ಹಾವೇರಿ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿತ್ತು. ಅತ್ತ ಸಂತ್ರಸ್ತೆಯನನು ಸ್ಥಳಾಂತರ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿತ್ತು.

 

ಹಾನಗಲ್​ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದುವರೆಗೆ ಒಟ್ಟು 7 ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ. ಆರೋಪಿಗಳಿಗೆ ಸೂಪಿ ಪೋರಂ ಸಂಘಟನೆ ಲಿಂಕ್​​ ದೆ ಎನ್ನಲಾಗ್ತಿದೆ. ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎಸ್​ಪಿ , ಸಂತ್ರಸ್ತೆ ವಿಚಾರಣೆ ಮುಗಿದಿದೆ.  ಹೀಗಾಗಿ ಸಾಂತ್ವನ ಕೆಂದ್ರದಿಂದ ಶಿಫ್ಟ್​ ಮಾಡಿದ್ದೇವೆ ಎಂದಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments