Thursday, November 20, 2025
22.5 C
Bengaluru
Google search engine
LIVE
ಮನೆರಾಜಕೀಯಅಂಬೇಡ್ಕರ್​ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ : ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್​ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಸಂವಿಧಾನ ಹಾಗೂ ರಾಷ್ಟ್ರೀಯ ಏಕತೆ ಸಮಾವೇಶ ನಡೆಸಲಾಯ್ತು.‌ ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ, ಈ ಸಮಾವೇಶವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ರು.‌ ಈ ಸಮಾವೇಶ ಇಂದು ಹಾಗೂ ನಾಳೆ ನಡೆಯಲಿದ್ದು ಸಂವಿಧಾನದ ಪೀಠಿಕೆ , ಮಹತ್ವವನ್ನ ರಾಜ್ಯದ ಜನರಿಗೆ ತಲುಪಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.‌ ಸಂವಿಧಾನಕ್ಕೆ 75 ವರ್ಷಗಳು ಪೂರ್ಣಗೊಂಡ ಹಿನ್ನಲೆ ಜನವರಿ 26 ರ ಗಣರಾಜ್ಯೋತ್ಸವದಂದು ಸಿಎಂ ಸಿದ್ದರಾಮಯ್ಯ ಸಂವಿಧಾನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಈ ಹಿನ್ನಲೆ ಇಂದು ಬೃಹತ್ ಸಮಾವೇಶ ಆಯೋಜ‌ನೆ ಮಾಡಲಾಗಿತ್ತು. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಟ್ಯಾಬ್ಲೂಗಳ ಮೆರವಣಿಗೆ ಮಾಡಲಾಯ್ತು ಈ ಮೂಲಕ ಸಂವಿಧಾನದ ಮಹತ್ವವನ್ನ ಜನರಿಗೆ ತಿಳಿಸಲಾಯ್ತು. ಸಂವಿಧಾನ ಹಾಗೂ ರಾಷ್ಟ್ರೀಯ ಏಕತೆ ಸಮಾವೇಶ ಉದ್ಘಾಟಿಸಿ ಮಾತಾನಾಡಿದ ಸಿಎಂ ಸಿದ್ದರಾಮಯ್ಯ, ಡಾ.ಬಿ.ಆರ್ .‌ಅಂಬೇಡ್ಕರ್ ಅವರು ಹಲವು ದೇಶದ ಸಂವಿಧಾನ ತಿಳಿದುಕೊಂಡು ನಮ್ಮ ದೇಶದ ಸಮಸ್ಯೆಗೆ ಪರಿಹಾರ ಸೂಚಿಸುವ ಹಾಗೆ ಸಂವಿಧಾನ ರಚನೆ ಮಾಡಿದ್ದಾರೆ,  ದೇಶದಲ್ಲಿ ಎರಡು ರೀತಿಯ ಅಪಪ್ರಚಾರ ಆಗ್ತಾಯಿದೆ. ಸಂವಿಧಾನ ರಚನೆ ಆಗಿರೋದು ದಲಿತ ಸಮುದಾಯದ ಉದ್ದಾರಕ್ಕೆ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎನ್ನುತ್ತಾರೆ.‌ ಸಂವಿಧಾನ ಪರವಾಗಿರುವವರ  ಕೈಯಲ್ಲಿ ಅಧಿಕಾರ ಕೊಡಬೇಕು. ಅಧಿಕಾರದಲ್ಲಿದ್ದವರೇ ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳ್ತಾರೆ, ಇಂಥವರಿಂದ ಸಂವಿಧಾನ ಉಳಿಯಲು ಸಾಧ್ಯನಾ. ನಾವೆಲ್ಲ ಸಂವಿಧಾನವನ್ನ ಉಳಿಸಲು ಮುಂದಾಗಬೇಕು ಎಂದ್ರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿರುವ ಈ ಸಮಾವೇಶ ನಾಳೆಯೂ (ಭಾನುವಾರ) ಕೂಡ ಮುಂದುವರೆಯಲಿದೆ. ಇಂದಿನ ಕಾರ್ಯಕ್ರಮದಲ್ಲಿ ಮಾತಾನಾಡಿದ ಸಚಿವ ಡಾ. ಹೆಚ್.ಸಿ .‌ಮಹದೇವಪ್ಪ, ನಾವು ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಸಂವಿಧಾನದ ಆಶಯಗಳ ಬಗ್ಗೆ ಪ್ರತಿಪಾದನೆ ಮಾಡ್ತಾ ಸಂವಿಧಾನದ ನಿರ್ದೇಶನ ತತ್ವ ಜಾರಿ ಮಾಡಲು ಬದ್ದರಾಗಿದ್ದೇವೆ ಎಂದ್ರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್  ಹೊರಟ್ಟಿ ಸಂವಿಧಾನದ ಪೀಠಿಕೆಯನ್ನ ಬೋಧಿಸಿದ್ರು.‌ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್,  ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್,  ನ್ಯಾಯಮೂರ್ತಿ ಗೋಪಾಲಗೌಡ್ರು ಸೇರಿ ಹಲವಾರು ಭಾಗಿಯಾಗಿದ್ರು.‌ ಒಟ್ನಲ್ಲಿ ರಾಜ್ಯ ಸರ್ಕಾರ ಸಂವಿಧಾನ ಹಾಗೂ ರಾಷ್ಟ್ರೀಯ ಏಕತಾ ಸಮಾವೇಶ ನಡೆಸುವ ಮೂಲಕ ಸಂವಿಧಾನದ ಮಹತ್ವವನ್ನ ರಾಜ್ಯದ ಜನರಿಗೆ ತಿಳಿಸುತ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments