ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಯಾವಾಗ.. ಯಾರು.. ಯಾವುದು..ಹೇಗೆ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ಸಾಲಿಗೆ ಈ ಹಾಡು ಸೇರಲಿದೆ. ಅದುವೇ ಓ ನಲ್ಲಾ.. ನೀ ನಲ್ಲಾ.. ಕರಿಮಣಿ ಮಾಲೀಕ ನೀನಲ್ಲ. ಈ ಸಾಂಗ್​​ ಸಖತ್​ ಟ್ರೆಂಡ್​ ಸೃಷ್ಟಿ ಮಾಡಿದೆ‌. ಇನ್ನೂ ಸಿಎಂ ಸಿದ್ದರಾಮಯ್ಯ ಇವತ್ತು ಮಂಡಿಸಿದ 2024-25ನೇ ಸಾಲಿನ ಬಜೆಟ್‌ ವಿರೋಧಿಸಿ ಬಿಜೆಪಿ, ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಏನಿಲ್ಲ.. ಏನಿಲ್ಲ ಎಂದು ಹಾಡು ಹೇಳಿ‌ ಪ್ರತಿಭಟನೆ ಆರಂಭಿಸಿದ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿಯೂ ಕೂಡ ಸಿಎಂ ಸಿದ್ದರಾಮಯ್ಯನವರ ಬಾಯಲ್ಲೂ ಏನಿಲ್ಲಾ ಏನಿಲ್ಲಾ ಅಂತಾ ಬಂದಿದೆ.

ಬಜೆಟ್ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಲಿಲ್ಲ. ಹಲವು ದಶಕಗಳಿಂದ ಆಡಳಿತ, ವಿರೋಧ ಪಕ್ಷಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಬಜೆಟ್ ಮಂಡಿಸುವಾಗ ಬಹಿಷ್ಕಾರ ಮಾಡಿರುವ ನಿದರ್ಶನ ಇಲ್ಲ. ನಾನು ಇನ್ನೂ ಬಜೆಟ್ ಓದಲು ಪ್ರಾರಂಭಿಸಿದ್ದೆ. ಆಗಲೇ ಬಿಜೆಪಿಯ ಸುನಿಲ್ ಕುಮಾರ್ ಏನಿಲ್ಲಾ.. ಏನಿಲ್ಲಾ ಅಂದರು. ಅವರ ತಲೆಯಲ್ಲಿ ಏನೂ ಇಲ್ಲಾ. ಅವರಿಗೆ ಸಂವಿಧಾನ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆಯಲ್ಲಿ ರಾಜಕೀಯ ಮಂಜು ಆಗಿದೆ. ಕಾಮಾಲೆ ರೋಗದವರಿಗೆ ಕಾಣೋದೆಲ್ಲ ಹಳದಿಯಾಗಿದೆ.ರಾಜಕೀಯ ಮಾಡಲಿ ಬೇಡ ಅನ್ನೋದಿಲ್ಲ. ಯಾವುದೇ ಟೀಕೆ, ಆರೋಪಗಳು ಆರೋಗ್ಯಕರವಾಗಿರಬೇಕು. ಬಿಜೆಪಿಯವರು ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದರು. ಬಜೆಟ್ ಕೇಳಬಾರದೆಂದು ಪ್ಲಾನ್ ಮಾಡಿಕೊಂಡು ಬಂದಿದ್ದರು. ನಾನು ಬಜೆಟ್​ನಲ್ಲಿ ವಸ್ತುಸ್ಥಿತಿಯನ್ನು ಹೇಳಿದ್ದೇನೆ. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದುಬಂದು ಒದ್ದಂತಾಗುತ್ತೆ. ಸತ್ಯ ಹೇಳಿದರೆ ತಡೆದುಕೊಳ್ಳಲು ಆಗೋದಿಲ್ಲ. ಕರ್ನಾಟಕಕ್ಕೆ ಆಗಿರುವ ಅನ್ಯಾಯ ಹೇಳಬೇಕಿರುವುದು ನನ್ನ ಕರ್ತವ್ಯ. ರಾಜ್ಯದ ಏಳೂವರೆ ಕೋಟಿ ಜನರಿಗೆ ಹೇಳಬೇಕಿರುವುದು ನನ್ನ ಕೆಲಸ. ಕೇಂದ್ರ ಹಣ ಕೊಟ್ಟಿಲ್ಲ ಅಂತಾ ಒಂದು ದಿನವಾದರೂ ಹೇಳಿದ್ದಾರಾ? ಇಷ್ಟು ಹಣ ಬಂದಿದೆ ಇಷ್ಟು ಬರಬೇಕು ಅಂತಾ ಹೇಳಿದ್ದಾರೆ. ಬಿಜೆಪಿ ಎಂಪಿಗಳು ಬಾಯಿಯೇ ಬಿಟ್ಟಿಲ್ಲ. ಇವರೆಲ್ಲಾ ಸಂಸದರಾಗಲು ಲಾಯಕ್ಕಿಲ್ಲ ಎಂದು ಸಿಎಂ ಗುಡುಗಿದರು.

By admin

Leave a Reply

Your email address will not be published. Required fields are marked *

Verified by MonsterInsights