Wednesday, April 30, 2025
32 C
Bengaluru
LIVE
ಮನೆರಾಜಕೀಯಬಿಎಸ್​ವೈ ವಿರುದ್ಧ ಪೋಕ್ಸೊ ಕೇಸ್​ : ತನಿಖೆ ಚುರುಕು

ಬಿಎಸ್​ವೈ ವಿರುದ್ಧ ಪೋಕ್ಸೊ ಕೇಸ್​ : ತನಿಖೆ ಚುರುಕು

ಬೆಂಗಳೂರು : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಬಿಜೆಪಿ ಸಂಸದೀಯ  ಮಂಡಳಿ ಸದಸ್ಯ ಬಿ. ಎಸ್​​​ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಹಲವು ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

ಯಡಿಯೂರಪ್ಪ  ಅವರ ಮನೆಯಲ್ಲಿ ಫೆಬ್ರವರಿ 2 ರಂದು ನಡೆದಿದ್ದ ಕೃತ್ಯದ ಬಗ್ಗೆ ಬಾಲಕಿಯ ತಾಯಿ ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೋ ) ಕಾಯ್ದೆ ಸೆಕ್ಷನ್​ 8 ಹಾಗೂ ಐಪಿಸಿ ಸೆಕ್ಷನ್​ 354 (ಎ) ಅಡಿ ಸದಾಶಿವನಗರ ಠಾಣೆಯಲ್ಲಿ ಮಾರ್ಚ್​ 14ರಂದು ಎಫ್​​ಐಆರ್​ ದಾಖಲಾಗಿತ್ತು.

ರಾಜ್ಯ ಸರ್ಕಾರದ ಆದೇಶದಂತೆ ಸದಾಶಿವನಗರ ಠಾಣೆ ಪೊಲೀಸರಿಂದ ಪ್ರಕರಣದ ಕಡತಗಳನ್ನು ಸುಪರ್ದಿಗೆ ಪಡೆದು ತನಿಖೆ ಆರಂಭಿಸಲಾಗಿದೆ. ಯಡಿಯೂರಪ್ಪ ವಿರುದ್ಧದ  ಆರೋಪಕ್ಕೆ ಸಂಬಂಧಪಟ್ಟಂತೆ  ಬಾಲಕಿ ಹಾಗೂ ಅವರ ತಾಯಿಯಿಂದಲೂ  ಮಾಹಿತಿ ಪಡೆಯಲಾಗುತ್ತಿದೆ ಎಂದು ಸಿಐಡಿ ಮೂಲಗಳು ಹೇಳಿವೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲ ವಿಡಿಯೋಗಳು ಲಭ್ಯವಾಗಿವೆ. ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಹಲವರ ಹೇಳಿಕೆ ಸಹ ದಾಖಲಿಸಿಕೊಳ್ಳಲಾಗಿದೆ. ಸಿಆರ್​ಪಿಸಿ 164 ಅಡಿ ಬಾಲಕಿಯ ಹೇಳಿಕೆ ದಾಖಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ ಎಂದು ತಿಳಿಸಿವೆ.

ವಿಚಾರಣೆ ನಡೆಸಿ ಕ್ರಮ : ಪುರಾವೆಗಳನ್ನು ಆಧಾರಿಸಿ ಆರೋಪಿಯನ್ನು ವಿಚಾರಣೆ  ನಡೆಸಲಾಗುವುದು. ಇದಾದ ನಂತರ  ಕಾನೂನು ಕ್ರಮ ಜರುಗಿಸಲಾಗುವುದು  ಎಂದು ಮೂಲಗಳು ಹೇಳಿವೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments