ಬೆಂಗಳೂರು : ಮಲ್ಲಿಕಾರ್ಜುನ್ ಎಂಬ ಹತ್ತು ವರ್ಷದ ಬಾಲಕನ ಪೊಲೀಸ್ ಕನಸನ್ನು ಪೊಲೀಸರು ಈಡೇರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹತ್ತು ವರ್ಷದ ಮಲ್ಲಿಕಾರ್ಜುನ್ ಎಂಬ ಬಾಲಕನ ಐಪಿಎಸ್ ಮಾಡುವ ಕನಸನ್ನು ಹೊಂದಿದ್ದ ಆದರೆ ಈ ವಯಸ್ಸಿನಲ್ಲೇ ಕ್ಯಾನ್ಸರ್ ಮಲ್ಲಿಕಾರ್ಜುನನ ದೇಹದಲ್ಲಿ ವಕ್ಕರಿಸಿದೆ ಕ್ಯಾನ್ಸರ್ ನಿಂದಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಪೊಲೀಸ್ ಆಗಬೇಕೆಂಬ ಕನಸನ್ನು ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಬಾಲಕನನ್ನ ಒಂದು ದಿನದ ಪೊಲೀಸ್ ಅಧಿಕಾರಿ ಮಾಡಿ ಬಾಲಕ ಐಪಿಎಸ್ ಕನಸು ಈಡೇರಿಸಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಬಾಲಕನಿಗೆ ಪೊಲೀಸ್ ಗೌರವ ನೀಡಿದರು ಈ ರೀತಿಯಾಗಿ ಉತ್ತರ ವಿಭಾಗ ಡಿಸಿಪಿ ಕಚೇರಿ ಇಂತಹ ಒಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.