Freedom TV

ಬೆಂಗಳೂರಲ್ಲಿ ರೆಸ್ಟೋರೆಂಟ್​ಗೆ ಹುಸಿ ಬಾಂಬ್​ ಕರೆ

ಬೆಂಗಳೂರು : ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಮತ್ತೊಂದು ಹೋಟೆಲ್​ಗೆ ಬಾಂಬ್​ ಬೆದರಿಕೆ ಬಂದಿದೆ. ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ ಗೆ ಹುಸಿ ಬಾಂಬ್​ ಬೆದರಿಕೆ ಕರೆ ಬಂದಿದೆ.

ಮೂರು ತಿಂಗಳಿಂದ ಸರಿಯಾದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ಪಾಸ್ತಾ ಸ್ಟ್ರೀಟ್​​ನ ಹಳೆಯ ಉದ್ಯೋಗಿ ವೇಲು ಮುರುಗನ್​ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿದ್ದ. ಪ್ರಕರಣ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ತಾನು ಈ ಬೆದರಿಕೆ ಹಾಕಿದ್ದಾಗಿ ವೇಲು ಮುರುಗನ್​ ತಪ್ಪೋಪ್ಪಿಕೊಂಡಿದ್ದಾನೆ.

Comments (0)

Your email address will not be published. Required fields are marked *

Back to top button