ಬೆಂಗಳೂರು : ರಾಜ್ಯದಲ್ಲಿ ಒಗ್ಗಟ್ಟಿನಿಂದ ಲೋಕಸಭೆ ಗೆಲ್ಲಲು ದೋಸ್ತಿಗಳು ಮೆಗಾ ತಂತ್ರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ – ಜೆಡಿಎಸ್ ರಾಜ್ಯ ಮಟ್ಟದ ಸಮನ್ವಯ ಸಭೆ ಆರಂಭವಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ರಾಜ್ಯಮಟ್ಟದ ಬಿಜೆಪಿ ಜೆಡಿಎಸ್ ಸಮನ್ವಯ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಹೆಚ್ ಡಿ ದೇವೇಗೌಡ ,ಬಿಎಸ್ ಯಡಿಯೂರಪ್ಪ,ಬಿವೈ ವಿಜಯೇಂದ್ರ, ಹೆಚ್ ಡಿ ಕುಮಾರಸ್ವಾಮಿ ಹಾಗೂ ಆರ್.ಅಶೋಕ್ ಭಾಗಿಯಾಗಿದ್ದಾರೆ.
ಲೋಕ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನಮಣಿಸಲು ಮೈತ್ರಿ ಪಡೆ ತಾಲೀಮು ನಡೆಸ್ತಾ ಇದೆ. ಉಭಯ ಪಕ್ಷಗಳ ನಡುವೆ ಚುನಾವಣಾ ಪ್ರಚಾರ ಕೈ ಗೊಳ್ಳುವ ನಿಟ್ಟಿನಲ್ಲಿ ಸಭೆ ಕೈಗೊಂಡಿದ್ದಾರೆ. ಬೂತ್ ಮಟ್ಟದಿಂದ ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಸಭೆ ನಡೆಸ್ತಾ ಇದಾರೆ. ಪ್ರಚಾರದ ವೈಖರಿ, ಜಂಟಿ ಸಮಾವೇಶಗಳ ರೂಟ್ ಮ್ಯಾಪ್ ಕುರಿತು ಎರಡೂ ಪಕ್ಷಗಳ ನಾಯಕರಿಂದ ಚರ್ಚೆ ನಡೆಸಲಾಗುತ್ತಿದೆ.
ಮೈತ್ರಿ ಗೆಲ್ಲಲು ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ತಳಮಟ್ಟದ ಸಮನ್ವಯ, ತಿಳುವಳಿಕೆ ಬಗ್ಗೆ ಮನವರಿಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ. 28 ಕ್ಷೇತ್ರಗಳಲ್ಲಿ ಗೆಲ್ಲಲು ರಣತಂತ್ರ ಹೂಡ್ತಾ ಇದ್ದೂ, ಹದಿನೈದು ದಿನದ ಮೊದಲೇ ಸಭೆಯ ಅವಧಿ ನಿಗಧಿಯಾಗಿತ್ತು HDK ಗೆ ಅನಾರೋಗ್ಯ ಕಾರಣದಿಂದ ಸಭೆ ಮಾಡೋಕೆ ಆಗಿಲ್ಲ. ನಿನ್ನೆ ಮೈಸೂರು ಮತ್ತು ಮಂಡ್ಯದಲ್ಲಿ ಉಭಯ ಪ್ಕಷಗಳ ನಾಯಕರು ಸಭೆ ನಡಿಸಿದ್ದೇವೆ. ಮೈತ್ರಿ ಧರ್ಮ ಪಾಲನೆ ಯಾವುದೇ ಕಾರಣಕ್ಕೂ ಮುರಿಯಲು ಬಿಡಲ್ಲ , 2 ಪಕ್ಷಗಳು ಹಾಲು ಜೇನಿದ್ದಂತೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ರು.