ಬೆಂಗಳೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಪುರ ಗ್ರಾಮದ ಕಲ್ಲೇಶ್ವರ ದೇವಸ್ಥಾನದ ರಥಕ್ಕೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಬೆಂಕಿ ಇಟ್ಟಿರುವ ಘಟನೆಯ ಬಗ್ಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ. ಈ ಕುರಿತಂತೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ತನ್ನ ಆಕ್ರೋಶ ಹೊರಹಾಕಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿ ಬಳಿಯ ಪುರ ಗ್ರಾಮದ ಕಲ್ಲೇಶ್ವರ ದೇವಸ್ಥಾನದ ರಥಕ್ಕೆ ಉತ್ತರ ಪ್ರದೇಶದ ಮೂಲದ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದ. ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತ, ಬಿಜೆಪಿ ಆ ಘಟನೆಯನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಿಂದೂ ಧರ್ಮೀಯರ ಮೇಲೆ ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಿತ್ಯ ನಿರಂತರವಾಗಿದೆ ಎಂದು ಆರೋಪಿಸಿದೆ.

“ಸಿಎಂ ಸಿದ್ದರಾಮಯ್ಯನವರೇ, ಇದು ನಿಮ್ಮ ಓಲೈಕೆ ಹಾಗೂ ಅರಾಜಕತೆಯ ಆಡಳಿತದ ದುಷ್ಪರಿಣಾಮ. ಹಿಂದೂ ಧರ್ಮ, ಹಿಂದೂ ದೇವಾಲಯ, ಹಿಂದೂಗಳ ಮೇಲಿನ ನಿಮಗೇಕೆ ಈ ಪರಿ ಅಸಡ್ಡೆ . ಹಿಂದೂಗಳಿಗೆ ನಿಮ್ಮ ಆಡಳಿತದಲ್ಲಿ ರಕ್ಷಣೆ ಇಲ್ಲವೇ..?’’ ಎಂದು ಬಿಜೆಪಿ ಟೀಕಿಸಿದೆ.

By admin

Leave a Reply

Your email address will not be published. Required fields are marked *

Verified by MonsterInsights