ಬಿಗ್ ಬಾಸ್ ಸೀಝನ್ ೧೦ ರ ಸ್ಪರ್ಧಿ ಡ್ರೋನ್ ಪ್ರತಾಪಿಗೆ ಸಾಲು ಸಾಲು ಅಗ್ನಿ ಪರೀಕ್ಷೆಗಳು ಎದುರಾಗುತ್ತಿದೆ ,ಇದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲದೆ ಡ್ರೋನ್ ಪ್ರತಾಪ್ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ರು ಆದ್ರೆ ಇಂದು ಬಿಗ್ ಬಾಸ್ ಶೋ ಮುಗಿದು ಎಲ್ಲಾ ಸ್ಪರ್ಧಿಗಳು ಹೊರಬರಲಿದ್ದಾರೆ , ಬಿಗ್ ಬಾಸ್ ಮನೆಯ ಆಟದ ಆನಂದದಿಂದ ಹೊರ ಬರಲಿರೋ ಡ್ರೋನ್ ಪ್ರತಾಪ್ ಗೀಗ ಕಾನೂನು ಕಂಟಕ ಎದುರಾಗಲಿದಿಯಾ ಅನ್ನೋ ಪ್ರಶ್ನೆ ಎದುರಾಗಿದೆ.
ಪ್ರತಾಪ್ ವಿರುದ್ಧ ೮೦ ಲಕ್ಷ ದೋಖಾ ಆರೋಪ ಮಾಡಿದ್ದ ಸಾರಂಗ್ ಮಾನೆ ಈಗ ತನ್ನ ಹಣಕ್ಕಾಗಿ ಪಟ್ಟು ಹಿಡಿಯುತ್ತಿರೋದು ,ಕಾನೂನು ಹೋರಾಟ ಮಾಡುವೆ ಎನ್ನುತ್ತಿರೋದು , ಡ್ರೋನ್ ಪ್ರತಾಪ್ಗೆ ಗಡುವು ಕೊಟ್ಟಿರೋದು ಇವೆಲ್ಲ ಡ್ರೋನ್ ಪ್ರತಾಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ , ಇದರ ಬೆನ್ನಲ್ಲೇ dr ಪ್ರಯಾಗ್ ಆರ್ ಆರ್ ನಗರದಲ್ಲಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ .
ಡ್ರೋನ್ ಪ್ರತಾಪ್ ಮತ್ತು ತಂಡ ಡ್ರೋನಾರ್ಕ್ ಏರೋಸ್ಪೇಸ್ ಎಂಬ ಕಂಪೆನಿ ರಚಿಸಿ ಸುಳ್ಳು ಮಾಹಿತಿಗಳನ್ನ ಕೊಟ್ಟು ರೈತರಿಗೆ ಹಾಗೂ ಜನರಿಗೆ ವಂಚಿಸುತ್ತಿದ್ದಾರೆ ಅನ್ನೋ ದೂರನ್ನ dr ಪ್ರಯಾಗ್ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ ಸಾರಂಗ್ ಅನ್ನೋ ಮಹಾರಾಷ್ಟ್ರ ಮೂಲದ ವ್ಯಕ್ತಿ ಪ್ರತಾಪ್ ನ ಕಂಪೆನಿಯಾದ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಜೊತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದೆ , ನಮ್ಮ ಜೊತೆ ಪ್ರತಾಪ್ ಬ್ಯುಸಿನೆಸ್ ಒಪ್ಪಂದಕ್ಕೆ ಒಪ್ಪಿದ್ದು ಕೊಡಬೇಕಿದ್ದ ಡ್ರೋನ್ ಗಳನ್ನ ಕೊಟ್ಟಿಲ್ಲ, ಅವುಗಳಿಗಾಗಿ ಕೊಟ್ಟಿದ್ದ ಹಣವನ್ನ ಕೂಡ ನೀಡದೆ ವಂಚನೆ ಮಾಡ್ತಿರುವುದಾಗಿ ಆರೋಪ ಮಾಡಿದ್ದಾರೆ,ಬಿಗ್ ಬಾಸ್ ಮನೆಯಿಂದ ಹೊರ ಬಂದಿರೋ ಡ್ರೋನ್ ಪ್ರತಾಪ್ ಈ ಆರೋಪಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.