ಬೆಂಗಳೂರು : ಬೆಂಗಳೂರು ಪೂರ್ವ ತಾಲೂಕಿನಲ್ಲಿ ಹೊಸ ಲೇಔಟ್ ಗೆ ಬಿಡಿಎ ಪ್ಲಾನ್ ನಡೆಸುತ್ತಿದ್ದು, ಬಿಡಿಎ ಹೊಸ ಲೇಔಟ್ ನಿರ್ಮಾಣದ ಬಗ್ಗೆ ಫ್ರೀಡಂ ಟಿವಿ ಮೊದಲು ಸುದ್ದಿ ಮಾಡಿತ್ತು. ಫ್ರೀಡಂ ಟಿವಿ ವರದಿ ಬೆನ್ನಲ್ಲೇ ಬಿಡಿಎ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಇಂದು ಬಿಡಿಎ ಮುಂದೆ ಪ್ರತಿಭಟನೆ ಮಾಡೋ ಮೂಲಕ ಕಮಿಷನರ್ ಗೆ ಬಿಸಿ ಮುಟ್ಟಿಸಲು ರೈತರು ಪ್ಲಾನ್ ಮಾಡಿಕೊಂಡಿದ್ದಾರೆ.
ಶಿವರಾಮ ಕಾರಂತ ಬಡಾವಣೆ ಮುಂದುವರೆದ ಲೇಔಟ್ಗೆ ಪ್ರಾಥಮಿಕ ಅಧಿಸೂಚನೆಗೆ ಸಿದ್ದತೆ ನಡೆಯುತ್ತಿದ್ದು, ಈ ಬೆನ್ನಲ್ಲೇ ಬಿಡಿಎ ವಿರುದ್ದ ಬೀದಿಗಿಳಿಯಲು ರೈತರು ಮುಂದಾಗಿದ್ದಾರೆ.
ಈಗಾಗಲೇ 2546 ಎಕರೆ ಜಾಗದಲ್ಲಿ ಶಿವರಾಮ ಕಾರಂತ ಬಡಾವಣೆಯನ್ನು ಬಿಡಿಎ ನಿರ್ಮಾಣ ಮಾಡಿತ್ತು. ಶಿವರಾಮ ಕಾರಂತ ಲೇಔಟ್ ನಿರ್ಮಾಣದಿಂದ ಈಗಾಗಲೇ ಗ್ರಾಮಸ್ಥರು ಬೀದಿಗೆ ಬಂದಿದ್ದಾರೆ. ಇದೀಗ ರಿಯಲ್ ಎಸ್ಟೇಟ್ ಉದ್ಯಮಿಗಳಿಗಾಗಿ ಬಿಡಿಎ ಶಿವರಾಮ ಕಾರಂತ ಲೇಔಟ್ ಆಗಿ ಮುಂದುವರೆಯುವಂತೆ ನಿರ್ಧಾರ ಮಾಡಲಾಗಿದ್ದು, ಬಿಡಿಎ ಕಮಿಷನರ್ ಆದೇಶವನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ಗೆ ರೈತರು ದೂರು ನೀಡಿದರು. ಶಿವರಾಮ ಕಾರಂತ ಮುಂದುವರೆದ ಬಡಾವಣೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳದಂತೆ ರೈತರು ಹಾಗೂ ನಿವೇಶನದಾರರ ಸಂಘ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾದೀನ ಪ್ರಕ್ರಿಯೆ ನಡೆಸಲು ಹೊರಡಿಸಿರುವ ಆದೇಶ ತಡೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.