Wednesday, April 30, 2025
24 C
Bengaluru
LIVE
ಮನೆರಾಜಕೀಯದೇವಸ್ಥಾನಗಳ ಆದಾಯ ಗ್ಯಾರಂಟಿಗೆ ಬಳಕೆ; ಶಾಸಕ ಯತ್ನಾಳ್

ದೇವಸ್ಥಾನಗಳ ಆದಾಯ ಗ್ಯಾರಂಟಿಗೆ ಬಳಕೆ; ಶಾಸಕ ಯತ್ನಾಳ್

ಬೆಂಗಳೂರು: ದೇವಸ್ಥಾನಗಳ ಆದಾಯವನ್ನ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದರು. ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೇವಸ್ಥಾನಗಳ ಆದಾಯ ದೇಗುಲಗಳ ಅಭಿವೃದ್ದಿಗೆ ಬಳಸಬೇಕು. ದೇವಸಸ್ಥಾನಗಳ ಆದಾಯವನ್ನ ಸರ್ಕಾರ ತೆಗೆದುಕೊಳ್ಳುತ್ತಿದೆ. ಆದಾಯವನ್ನ ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಅಂತಾ ದೆಹಲಿ ಚಲೋ ಮಾಡಿದ್ದರು. ಇಲ್ಲಿ ನಮ್ಮ ದೇವರು, ನಮ್ಮ ದೇಗುಲ ನಮ್ಮ ಹಕ್ಕು ಎನ್ನುತ್ತೇವೆ. ದೇವಸ್ಥಾನಕ್ಕೆ ಅಂತಾ ನಾವು ಹಣ ಕೊಡುತ್ತೇವೆ. ಇದು ಯಾರಪ್ಪನ ಆಸ್ತಿ ಅಲ್ಲ ದೇಗುಲಗಳ ಮೇಲೆ ಮಾತ್ರ ಕಾನೂನು ಏಕೆ..? ದೇಗುಲಗಳಲ್ಲಿ ಮುಕ್ತ ಆಡಳಿತ ತನ್ನಿ. ಆಗ ನಿಜವಾದ ಜಾತ್ಯಾತೀತತೆ ಎಂದರು.

ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಸರ್ಕಾರ ರಾಜ್ಯಪಾಲರ ಭಾಷಣ ಸಿದ್ದ ಮಾಡುತ್ತೆ. ಇದು ರಾಜ್ಯಪಾಲರ ಘನತೆಗೆ ಧಕ್ಕೆ. ಎನ್ ಇಪಿ ಬದಲಾವಣೆ ಮಾಡಿದ್ದಾರೆ. ಪಠ್ಯದಲ್ಲಿ ತಾಜಮಹಲ್ ಕೆಂಪುಕೋಟೆ ಕಟ್ಟಿದವರ ಬಗ್ಗೆ ಪಾಠ ಇರುತ್ತೆ. ಆದರೆ ಮಧುರ ಕಾಶಿ ಒಡೆದವರ ಬಗ್ಗೆ ಇರಲ್ಲ ಎಂದು ಕಿಡಿಕಾರಿದರು.

ರೈತರ ಪರಿಹಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವರು ಹೇಳುತ್ತಾರೆ ಎಂದರು. ಈ ವೇಳೆ ಸಚಿವ ಶಿವಾನಂದ್ ಪಾಟೀಲ್ ಮಧ್ಯ ಪ್ರವೇಶಿಸಿ, ಆಧಾರ ಇಟ್ಟು ಮಾತನಾಡಬೇಕು ಎಂದರು ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇನೆ. ಹೀಗೆಲ್ಲಾ ಮಾತನಾಡನಾರದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್ ಮಾಧ್ಯಮಗಳಲ್ಲಿ ಬಂದ ವಿಚಾರ ಪ್ರಸ್ತಾಪಿಸಬಾರದು ಅಂದ್ರೆ ಹೇಗೆ ಎಂದು ಪ್ರಶ್ನಿಸಿದ್ರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments