Freedom TV
ಫ್ರೀಡಂ ಟಿವಿ ಬಳಿ ಇದೆ ಯುವಕನ ಆತ್ಮಹತ್ಯೆಯ ವಿಡಿಯೋ

ಬೆಂಗಳೂರು: ಅತ್ತಿಗುಪ್ಪೆಯ ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ದೃಶ್ಯ ಫ್ರೀಡಂ ಟಿವಿಗೆ ಲಭ್ಯವಾಗಿದೆ. ಮೆಟ್ರೋ ರೈಲು ಬರುವ ಸಮಯ ನೋಡಿ ಹಳಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಹಾರಾಷ್ಟ್ರ ಮೂಲದ ಮೃತ ವಿದ್ಯಾರ್ಥಿ ದೃವ್ ಟಕ್ಕರ್ ಸರ್ಕಾರಿ ಲಾ ಕಾಲೇಜಿನಲ್ಲಿ ಫಸ್ಟ್ ಸೆಮಿಸ್ಟರ್ನಲ್ಲಿ ಓದುತ್ತಿದ್ದರು. ಮೆಟ್ರೊ ರೈಲು ಹರಿದು ಯುವಕನ ರುಂಡ- ಮುಂಡ ಬೇರ್ಪಟ್ಟಿತು. ಖಿನ್ನತೆ ಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಘಟನೆ ಬಗ್ಗೆ ಚಂದ್ರ ಲೇಔಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ತನಿಖೆ ಮುಂದುವರೆಸಿದ್ದಾರೆ.



