ಬೆಂಗಳೂರು ರೌಡಿ ಶೀಟರ್ ಗಳ ಅಡ್ಡ ಅಂದ್ರೆ ತಪ್ಪಾಗೋದಿಲ್ಲ. ಪ್ರತಿ ಗಲ್ಲಿಗಲ್ಲಿಯ ಎಲ್ಲಂದ್ರಲ್ಲಿ ಹೊಡಿ, ಬಡಿ, ಕೊಲೆ ಸುಲಿಗೆ ಕಾಮನ್ ಆಗ್ಬಿಟ್ಟಿದೆ. ಇನ್ನೇನು ಬೆಂಗಳೂರು ರೌಡಿಸಂ ಕಾವಿನಿಂದ ತಣ್ಣಗಾಗ್ತಾ ಇದೆ ಅಂತ ನಿಟ್ಟುಸಿರು ಬಿಡೋ ಅಷ್ಟ್ರಲ್ಲೆ, ಬೆಂಗಳೂರಿಗರನ್ನ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ.
ಬೆಂಗಳೂರಿನ ಕಲ್ಯಾಣ್ ನಗರದ ರಿಂಗ್ ರಸ್ತೆಯಲ್ಲಿ ವ್ಯಕ್ತಿಗೆ ರಾಡ್ ನಿಂದ ಹಲ್ಲೆ ಮಾಡಿ, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದೇ ಹೋಗಿದೆ. ಕಳೆದ ಮಾರ್ಚ್ 31 ರಂದು ಈ ಅಮಾನವೀಯ ಘಟನೆ ನಡೆದಿದ್ದೂ, ಘಟನೆಗೆ ಕುರಿತಂತೆ ಯಾವುದೇ ದೂರು ದಾಖಲಾಗದೇ ಇರುವುದು ಅಚ್ಚರಿ ಉಂಟುಮಾಡಿದೆ.
ಕೊಲೆಗೈದ ವ್ಯಕ್ತಿ ಯಾವುದೇ ಭಯವಿಲ್ಲದೇ, ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾನೆ. ರಾಡ್ ನಿಂದ ಹಲ್ಲೆ ಮಾಡಿರುವ ದೃಶ್ಯ, ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಸೆರೆಯಾಗಿದೆ. ಆದ್ರೆ ಹಲ್ಲೆಗೊಳಗಾದ ವ್ಯಕ್ತಿ ಯಾರು ಅನ್ನೋದು ಇಲ್ಲಿಯವರೆಗೂ ಪತ್ತೆಯಾಗದೇ ಇರೋದು ಬೇಸರದ ಸಂಗತಿ. ಪೊಲೀಸರಿಗೆ ಕೊಲೆಯ ಕುರಿತಂತೆ, ದೂರು ನೀಡದ ಹಿನ್ನಲೆ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ. ಮರ್ಡರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಸಧ್ಯ ಪೋಲಿಸರು ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕ್ತಾ ಇದಾರೆ.