ಬಳ್ಳಾರಿ, ಫೆ.07: ಜಿಲ್ಲೆಯ ಪ್ರಮುಖ ಗುತ್ತಿಗೆದಾರ ಪಿಚ್ಚೇಶ್ವರ ರಾವ್ ಅವರ ಮನೆ ಮತ್ತು ಪಾರ್ವತಿ ನಗರದಲ್ಲಿನ ಅವರ ಶ್ರೀನಿವಾಸ್ ಕನ್ಸಸ್ಟ್ರಕ್ಷನ್ಸ್ ಕಚೇರಿ ಮೇಲೆ ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ನಡೆಸಿದ್ದಾರೆ.
ರಸ್ತೆ, ಕಾಲುವೆ ಸೇರಿದಂತೆ ವಿವಿಧ ಬೃಹತ್ ಕಾಮಗಾರಿಗಳ ಕಾಂಟ್ರಾಕ್ಟ್ ಮಾಡಿರುವ ಪಿಚ್ಚೇಶ್ವರ ರಾವ್.ಆದಾಯ ತೆರಿಗೆ ವಂಚನೆ ಹಾಗೂ ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಂದಿರುವ ಐಟಿ ಅಧಿಕಾರಿಗಳ ನಾಲ್ಕು ಜನರ ತಂಡದಿಂದ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿಯ ವೇಳೆ ಪಿಚ್ಚೇಶ್ವರರಾವ್ ಕಚೇರಿಯಲ್ಲಿದ್ದರು.