ಬಾಗಲಕೋಟೆ: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಎಲ್ಲೆಡೆ ನೀರಿನ ಬರದ ಎಫೆಕ್ಟ್ ತಟ್ಟಿದೆ. ನೀರಿಗಾಗಿ ಜನ ಪರದಾಡುವ ಸ್ಥಿತಿ ಎದುರಾಗಿದೆ. ಹನಿ ಹನಿ ನೀರಿಗೂ ಜನರು ಪರದಾಡುತ್ತಿದ್ದಾರೆ. ತಲೆಸುಡುವ ಬಿಸಿಲ ನಡುವೆ ಕೃಷ್ಣಾ ನದಿ ನೀರು ಗಣನೀಯ ಪ್ರಮಾಣದಲ್ಲಿ ಖಾಲಿಯಾಗಿದೆ. ಗ್ರಾಮೀಣ ಭಾಗದ ಕೆರೆ, ಬಾವಿ, ಕೊಳವೆಬಾವಿಗಳು ಬತ್ತುತ್ತಿವೆ. ಹೀಗಾಗಿ ಹಳ್ಳಿಗಳಲ್ಲಿ ನೀರಿಗಾಗಿ ಪರದಾಟ ಶುರುವಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದ ವಾರ್ಡ್5 ರ ಸೀಮಿ ಲಕ್ಕವ್ವ ಗುಡಿ ಬಳಿಯಲ್ಲಿ ಕಳೆದ 30 ವರ್ಷಗಳಿಂದ ಜನರು ವಾಸವಾಗಿದ್ದಾರೆ. ಬೇಸಿಗೆಯ ಆರಂಭವಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ..ಎಲೆಕ್ಷನ್ ಬಂದಾಗ ಬರ್ತಾರೆ. ಕೈ ಕಾಲು ಹಿಡುಕೊಂಡು ವೋಟ್ ಕೇಳ್ತಾರೆ.ಜನಪ್ರತಿನಿಧಿಗಳು ಯಾರು ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ.. ಗ್ರಾಮ ಪಂಚಾಯತಿ ಯವ್ರಿಗೆ ಹೇಳಿದ್ರೂ ಮಾಡ್ತಿವಿ ಅಂತಾರೆ, ಇನ್ನೂ ನಮಗೆ ಕುಡಿಯುವ ನೀರಿನ ಸಮಸ್ಯೆ ತುಂಬಾಇದೆ. ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಗ್ರಾಮದ ಯಂಕವ್ವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.