ರಾಜಕೀಯಸುದ್ದಿ

ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಪಿ. ಹೆಚ್ ಪೂಜಾರ್ ನಡುವೆ ಶೀತಲ ಸಮರ

ಬಾಗಲಕೋಟೆಯಲ್ಲಿ ಬಿಜೆಪಿ ಶೀತಲ ಸಮರ ಇನ್ನೂ ನಿಂತಿಲ್ಲ. ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಹಿರಿಯ ನಾಯಕ ಪಿ. ಹೆಚ್ ಪೂಜಾರ್ ಗೈರಾಗಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಿಂದ ಬಾಗಲಕೋಟೆ ಕ್ಷೇತ್ರದಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ಪೂಜಾರ್ ಅಂತರ ಕಾಯ್ದುಕೊಂಡಿದ್ದಾರೆ.

ಲೋಕಸಭೆ ಚುನಾವಣೆಯ ಮೊದಲ ಪ್ರಚಾರ ಸಭೆಗೆ ಪೂಜಾರ್ ಗೈರಾಗಿದ್ದೂ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಪಿ. ಹೆಚ್ ಪೂಜಾರ್ ನಡುವೆ ಶೀತಲ ಸಮರ ಏರ್ಪಟ್ಟಿದೆ ಎನ್ನಲಾಗ್ತಾ ಇದೆ. ಮುನಿಸಿಕೊಂಡ ನಾಯಕರ ಸಂಧಾನಕ್ಕೆ ರಾಜ್ಯ ನಾಯಕರು ತಲೆಕೆಡಿಸಿ ಕೊಳ್ಳದೇ ಹಿಂದೇಟು ಹಾಕಿದಂತಿದೆ. ಬಾಗಲಕೋಟೆ ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆದಿದೆ.

Comments (0)

Your email address will not be published. Required fields are marked *

Back to top button