Thursday, January 29, 2026
24.2 C
Bengaluru
Google search engine
LIVE
ಮನೆರಾಜ್ಯಬಾಗಲಕೋಟೆ, ಬಾದಾಮಿ ರೈಲ್ವೆ ನಿಲ್ದಾಣಗಳಿಗೆ ಅಭಿವೃದ್ಧಿ ಭಾಗ್ಯ

ಬಾಗಲಕೋಟೆ, ಬಾದಾಮಿ ರೈಲ್ವೆ ನಿಲ್ದಾಣಗಳಿಗೆ ಅಭಿವೃದ್ಧಿ ಭಾಗ್ಯ

ಬಾಗಲಕೋಟೆ: ಬಾಗಲಕೋಟೆ ನಗರದ ಹೊಸ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಹಾಗೂ ರಸ್ತೆ ಮೇಲುಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ವರೆನ್ಸ್ ಮೂಲಕ ನೆರವೇರಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಏಕಕಾಲದಲ್ಲಿ ದೇಶಾದ್ಯಾಂತ ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಮತ್ತು 1500 ಮೇಲ್ಸೆತುವೆ ಮತ್ತು ಕೆಳಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ವಿಡಿಯೋ ಕಾಫರೆನ್ಸ್ ಮೂಲಕ ಉದ್ಘಾಟಿಸಿದರು.

ಬಾಗಲಕೋಟ ನಗರದ ರೈಲ್ವೆ ನಿಲ್ದಾಣ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡ ಅವರು, ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಬಾಗಲಕೋಟೆ ಮತ್ತು ಬಾದಾಮಿ ರೈಲ್ವೆ ನಿಲ್ದಾಣ, ಹಾಗೂ ಬಾದಾಮಿ ಸ್ಟೇಷನ್ ಹತ್ತಿರ ರಸ್ತೆ ಮೇಲ್‌ಸೇತುವೆ ನಿರ್ಮಾಣ ಕಾಮಗಾರಿ ಮತ್ತು ಗುಳೇದಗುಡ್ಡ ಸ್ಟೇಷನ್ ಹತ್ತಿರ ರಸ್ತೆ ಮೇಲ್‌ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಬಾಗಲಕೋಟೆ ಮತ್ತು ಬಾದಾಮಿ ಸ್ಟೇಷನ್ ಆಯ್ಕೆಯಾಗಿದೆ. ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಸೌಲಭ್ಯ ಇರಬೇಕು ಎಂದು ಆದ್ಯತೆ ನೀಡಲಾಗಿದೆ. ಬಾದಾಮಿ ಸುತ್ತಮುತ್ತ ಪ್ರವಾಸೋದ್ಯಮ ಇರುವುದರಿಂದ ರೈಲ್ವೆ ನಿಲ್ದಾಣ ಮೇಲ್ದರ್ಜೆಯ ಗೆ ಏರಿಸಲು ಕೇಂದ್ರ ರೈಲ್ವೆ ಮಂತ್ರಿ ಸಹಕಾರ ನೀಡಿದ್ದಾರೆ ಎಂದರು.

ಕೇಂದ್ರ ಸರ್ಕಾರದ ರೈಲ್ವೆ ಯೋಜನೆಯಿಂದ ಜಿಲ್ಲೆಗೆ ರೂ.103.37ಕೋಟಿ ಕೊಡುಗೆ ನೀಡಲಾಗಿದೆ. ಈ ಮೊದಲು ಬಾಗಲಕೋಟೆ ನೂತನ ರೈಲ್ವೆ ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ರೂ.12.45 ಕೋಟಿ ಮಂಜೂರಾಗಿದ್ದು ಇದರಲ್ಲಿ ಈಗಾಗಲೇ ರೂ. 8.00 ಕೋಟಿ ಖರ್ಚಾಗಿದ್ದು, ಇನ್ನುಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದನ್ನು ಹೊರತು ಪಡಿಸಿ ಅಮೃತ ಭಾರತ ಸ್ಟೇಷನ್‌ ಯೋಜನೆ ಅಡಿಯಲ್ಲಿ ರೂ.16.24 ಕೋಟಿ ಮಂಜೂರಾಗಿದ್ದು, ಈ ಮೊತ್ತದಲ್ಲಿ ಪ್ಲಾಟ್ ಫಾರ್ ಶೆಲ್ಟರ್, ಪಾರ್ಕಿಂಗ್, ಗಾರ್ಡನ್, ಎಸ್ಕಲೇಟರ್, ಲಿಪ್ಟ್, ಇನ್ನೂಳಿದ ಆಧುನಿಕ ಸೌಲಭ್ಯವನ್ನು ನೀಡಲಾಗುವುದು ಎಂದು ತಿಳಿಸಿದರು.

ಬಾದಾಮಿ ರೈಲ್ವೆ ನಿಲ್ದಾಣ ಕಟ್ಟಡಕ್ಕೆ ಈಗಾಗಲೇ ರೂ. 2.50 ಕೋಟಿ ಈ ಮೊದಲು ಖರ್ಚಾಗಿದ್ದು, ಇದನ್ನು ಹೊರತು ಪಡಿಸಿ ಅಮೃತ ಭಾರತ ಯೋಜನೆ ಆಡಿ ಬಾದಾಮಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗೆ ರೂ.15.21 ಕೋಟಿ ಮಂಜೂರಾಗಿದ್ದು, ಈ ಮೊತ್ತದಲ್ಲಿ ಪ್ಲಾಟ್ ಫಾರ್ ಶೆಲ್ಟರ್, ಪಾರ್ಕಿಂಗ್, ಗಾರ್ಡನ್, ಎಸ್ಕಲೇಟ‌ರ್, ಲಿಪ್ಟ್, ಇನ್ನೂಳಿದ ಆಧುನಿಕ ಸೌಲಭ್ಯವನ್ನು ನೀಡಲಾಗುವುದು ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments