ಬಾಗಲಕೋಟೆ: ಭಾರತೀಯ ಜನತಾ ಪಕ್ಷದಲ್ಲಿ ಟಿಕೆಟ್ ಘೋಷಣೆ ಸಾಮೂಹಿಕ ನಿರ್ಧಾರ ಮೇಲೆ ಆಗುತ್ತದೆ,ಒಬ್ಬ ವ್ಯಕ್ತಿಯಿಂದ ಯಾವುದೇ ನಿರ್ಧಾರ ಆಗುವುದಿಲ್ಲ,ಎಂದು ಬಾಗಲಕೋಟೆಯಲ್ಲಿ ಮಹೇಶ್ ಟೆಂಗಿನಕಾಯಿ ಹೇಳಿದರು.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಲೋಕಸಭಾ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ದಿಂದ ಮನೆ ಮನೆ ಸಂಪರ್ಕ ಅಭಿಯಾನ, ಫಲಾನುಭವಿ ಸಂಪರ್ಕ ಅಭಿಯಾನ,ಯುವ ಮೋರ್ಚಾ,ಎಸ್ ಸಿ ಮೋರ್ಚಾ,ಮಹಿಳಾ ಮೋರ್ಚ ಎಲ್ಲಾ ಮೂರ್ಚೆಗಳ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಎಲ್ಲ ಕಾರ್ಯಕರ್ತರನ್ನ ಪ್ರವೃತ್ತಗೊಳಿಸುವ ಕಾರ್ಯಕ್ರಮ ಪ್ರಾರಂಭವಾಗಿದೆ, ಪ್ರಧಾನಮಂತ್ರಿ ಮೋದಿಜಿ ಅವರು ಅತ್ಯುತ್ತಮ ಕಾರ್ಯ ಮಾಡುವುದರ ಮೂಲಕ ದೇಶವನ್ನ ಅಭಿವೃದ್ಧಿ ಪಥದತ್ತ ಮುನ್ನಡೆಸುವ ನಿಟ್ಟಿನಲ್ಲಿ ಬಹಳ ಪ್ರಾಮುಖ್ಯತೆ ವಹಿಸಿದೆ, 2014ರಿಂದ 2024ರ ವರೆಗಿನ ಯುಪಿಐ-ಎನ್‌ಡಿಎ ಕಾಲದ ಅಂಕಿ ಅಂಶಗಳನ್ನು ನೋಡಿದಾಗ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯತ್ತ ದೇಶ ಮುನ್ನಡೆಯುತ್ತಿದೆ,ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ವಿಷಯಕ್ಕೆ ಪ್ರತಿಕ್ರಿಯೆ ಸಂವಿಧಾನ ಬದಲಾವಣೆ ಎಂಬುದು ನಮ್ಮ ಅಜೆಂಡದಲ್ಲಿ ಇಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚನೆ ಮಾಡಿದ ಸಂವಿಧಾನದ ಅನುಗುಣವಾಗಿ ಕೆಲಸ ಆಗುತ್ತದೆ, ವಿನಾಕಾರಣ ಮಾಧ್ಯಮದ ಮೇಲೆ ಹಾಗೂ ವ್ಯಕ್ತಿಗತವಾಗಿ ಘೋಷಣೆ ಮಾಡುವುದು ಯಾವುದು ಶೋಭೆ ತರುವಂತಹದಲ್ಲ, ಚುನಾವಣೆ ಅಂದ ಮೇಲೆ ಟಿಕೆ ಟಿಪ್ಪಣಿ ಸಹಜ ಒಟ್ಟಿನಲ್ಲಿ ಎಲ್ಲರೂ ಒಂದಾಗಿ 3ನೇ ಬಾರಿಗೆ ನರೇಂದ್ರ ಮೋದಿಯವರನ್ನ ಪ್ರಧಾನಿ ಮಾಡಬೇಕು ಎಂದರು.

ಜಗದೀಶ್ ಶೆಟ್ಟರ್‌ಗೆ ಲೋಕಸಭಾ ಟಿಕೆಟ್ ನೀಡುವ ವಿಚಾರ ಪಾರ್ಟಿ ಏನು ನಿರ್ಧಾರ ತೆಗೆದುಕೊಳ್ಳುತ್ತೇ ಅದಕ್ಕೆ ನಾವು ಬದ್ಧರಾಗಿರಬೇಕು,ಪಕ್ಷದ ನಿರ್ಧಾರವೇ ಅಂತಿವಾಗಿರುತ್ತೆ. ಯಾರೇ ಇದ್ದರೂ ಗೆಲ್ಲಿಸುವುದೊಂದೆ ನಮ್ಮ ಗುರಿ, ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಬದಲಾವಣೆ ಕೂಗು ವಿಚಾರ..ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಒಳ್ಳೆಯ ಕೆಲಸ ಮಾಡಿದ್ದಾರೆ.ಮೋದಿಯವರನ್ನ 3ನೇ ಬಾರಿ ಪ್ರಧಾನಿಯನ್ನಾಗಿಸೋದೆ ನಮ್ಮ ಗುರಿ ಎಂದು ಬಾಗಲಕೋಟೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು,

By admin

Leave a Reply

Your email address will not be published. Required fields are marked *

Verified by MonsterInsights