Monday, December 8, 2025
17.4 C
Bengaluru
Google search engine
LIVE
ಮನೆUncategorizedಗದ್ದೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ ಸ್ಥಳೀಯರಲ್ಲಿ ಮೂಡಿದ ಆತಂಕ...!!

ಗದ್ದೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ ಸ್ಥಳೀಯರಲ್ಲಿ ಮೂಡಿದ ಆತಂಕ…!!

ಮಡಿಕೇರಿ: ನವಜಾತ ಶಿಶುವಿನ ಮೃತದೇಹಯೊಂದ ಗ್ರಾಮದ ಗದ್ದೆಯಲ್ಲಿ ಕಂಡುಬಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆಯಲ್ಲಿರುವ ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ನಡೆದಿದೆ. ನವಜಾತ ಶಿಶುವಿನ ಮೃತದೇಹ ಮಣ್ಣಿನೊಳಗೆ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಗದ್ದೆಯಲ್ಲಿ ಗುಂಡಿ‌ ಅಗೆದು ಹಾಕುತ್ತಿರುವುದನ್ನು ಸ್ಥಳೀಯರು ನೋಡಿಧ್ದರೂ ಸತ್ತ ಪ್ರಾಣಿಗಳ ಮೃತದೇಹವನ್ನು ಹೂಳಿರಬಹುದು ಎಂದು ಭಾವಿಸಿದ್ದರು. ಆದರೂ ಸಂಜೆ ವೇಳೆಗೆ ಸ್ಥಳಿಯರಲ್ಲಿ ಸಂಶಯ ಮೂಡಿ ಆ ಸ್ಥಳದ ಮಣ್ಣನ್ನು ತೆಗೆದು ನೋಡಿದಾಗ ಇಂದೇ ಜನಿಸಿದ ಮಗುವಿನ ಮೃತದೇಹ ಕಂಡುಬಂದಿದೆ. ಈ ಮಗುವಿನ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಸ್ಥಳಕ್ಕೆ ಪೊಲೀಸರು ಮತ್ತು ಸಾರ್ವಜನಿಕರು ದೌಡಯಿಸಿದ್ದು, ಸ್ಥಳಕ್ಕೆ ತಹಶಿಲ್ದಾರರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಘಟನೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ…

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments