Monday, June 23, 2025
26.6 C
Bengaluru
Google search engine
LIVE
ಮನೆUncategorizedಕನ್ನಡದ ಕಾಂತಾರ ಹಾಗೂ ಕೆಜಿಎಫ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ

ಕನ್ನಡದ ಕಾಂತಾರ ಹಾಗೂ ಕೆಜಿಎಫ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ನಿರೀಕ್ಷೆಯಂತೆ . ಕನ್ನಡದಲ್ಲಿ ಬೆಸ್ಯ್ ಆ್ಯಕ್ಟರ್ ಪ್ರಶಸ್ತಿ ಪಡೆದ 4ನೇ ಕಲಾವಿದರಾಗಿ ರಿಷಬ್ ಶೆಟ್ಟಿ ಹೊರಹೊಮ್ಮಿದ್ದು, ಹೊಂಬಾಳೆ ಅತ್ಯುತ್ತಮ ಚಿತ್ರಗಳನ್ನು ನೀಡುವ ಪ್ರೊಡಕ್ಷನ್ ಹೌಸ್ ಆಗಿ ಪರಗಣಿಸಲ್ಪಟ್ಟಿದೆ. ಚೋಮನದುಡಿ ಪಾತ್ರಕ್ಕಾಗಿ ವಾಸುದೇವ ರಾವ್, ತಬರನ ಕಥೆ ಚಿತ್ರಕ್ಕಾಗಿ ಚಾರು ಹಾಸನ್, ನಾನು ಅವನಲ್ಲ ಅವಳು ಚಿತ್ರಕ್ಕಾಗಿ ಸಂಚಾರಿ ವಿಜಯ್ ನಂತರ ಇದೀಗ ತುಳು ನಾಡಿದನ ದೈವರಾಧನೆಯನ್ನು ಬಿಂಬಿಸುವ ಹಾಗೂ ಕಾಡನ್ನು ರಕ್ಷಿಸಿ ಎನ್ನುವ ಸಂದೇಶ ಸಾರುವ ಕಾಂತಾರ ಚಿತ್ರದ ಅದ್ಭುತ ನಟನೆಗಾಗಿ ರಿಷಭ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇದುವರೆಗೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಗಳು ಬಂದಾಗ ಮಾತ್ರ ಅಂಥದ್ದೊಂದು ಚಿತ್ರವಿದೆ ಎಂಬುವುದು ಕನ್ನಡ ಚಿತ್ರ ರಸಿಕರ ಗಮನಕ್ಕೆ ಬರುತ್ತಿತ್ತು. ಆದರೆ, ಈ ಸಾರಿ ಪ್ಯಾನ್ ಇಂಡಿಯಾದಲ್ಲಿ ಹೆಸರು ಮಾಡಿದ ಯಶ್ ನಟನೆಯ ಕೆಜಿಎಫ್-2 ಹಾಗೂ ಕಾಂತಾರ ಚಿತ್ರಗಳು ಎರಡೆರಡರು ಪ್ರಶಸ್ತಿಗಳು ಬಾಚಿ ಕೊಂಡಿರುವುದು ಮತ್ತೊಂದು ವಿಶೇಷ. ಕನ್ನಡಕ್ಕಲ್ಲದೇ ಮತ್ತೆ ಯಾವ ಯಾವ ಚಿತ್ರಗಳಿಗೆ ಪ್ರಶಸ್ತಿಗಳು ಬಂದಿವೆ, ಇಲ್ಲಿದೆ ಲಿಸ್ಟ್.

ಬೆಸ್ಟ್ ಫೀಚರ್ ಫಿಲ್ಮ್ಛ ಆಟ್ಟಮ್ (Best Feature Film – Aattam)
ಅತ್ಯುತ್ತಮ ನಟ – ರಿಷಭ ಶೆಟ್ಟಿ (Best Actor – Rishab Shetty)
ಅತ್ಯುತ್ತಮ ನಟಿಯರು- ನಿತ್ಯಾ ಮೆನನ ಮತ್ತು ಮಾನಸಿ ಪರೇಖ್ (Best Actress – Nithya Menen and Manasi Parekh)
ಅತ್ಯುತ್ತಮ ನಿರ್ದೇಶಕ- ಸೂರಜ್ ಬರ್ಜಾತ್ಯ (Best Director – Sooraj Barjatya)
ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ (Best Supporting Actress – Neena Gupta)
ಅತ್ಯುತ್ತಮ ಪೋಷಕ ನಟ (Best Supporting Actor – Pawan Malhotra)
ಅತ್ಯುತ್ತಮ ಮನೋರಂಜನಾ ಚಿತ್ರ- ಕಾಂತಾರ (Best Feature Film Providing Wholesome Entertainment – Kantara)
ಅತ್ಯುತ್ತಮ ಹೊಸ ಮುಖಗಳು- ಫೌಜಾ, ಪ್ರಮೋದ್ ಕುಮಾರ್ (Best Debut – Fouja, Pramod Kumar)
ಅತ್ಯುತ್ತಮ ತೆಲಗು ಚಿತ್ರ- ಕಾರ್ತಿಕೇಯ 2 (Best Telugu Film – Kartikeya 2)
ಅತ್ಯುತ್ತಮ ಚಿತ್ರ- ಪೊನ್ನಿಯನ್ ಸೆಲ್ವನ್ ಭಾಗ-1 (Best Tamil Film – Ponniyin Selvan – Part 1)
ಅತ್ಯುತ್ತಮ ಪಂಜಾಬಿ ಚಿತ್ರ-ಬಾಘಿ ದಿ ಧೀ(Best Punjabi Film – Baaghi Di Dhee)
ಅತ್ಯುತ್ತಮ ಒಡಿಯಾ ಚಿತ್ರ – (Best Odia Film – Daman)
ಅತ್ಯುತ್ತಮ ಮಲಯಾಳಂ ಚಿತ್ರ- ಸೌದಿ ವೆಲಕ್ಕ ಸಿಸಿ .225/2009 (Best Malayalam Film – Saudi Velakka CC.225/2009)
ಅತ್ಯುತ್ತಮ ಮರಾಠಿ ಚಿತ್ರ-ವಾಲ್ವಿ (Best Marathi Film – Vaalvi)
ಅತ್ಯುತ್ತಮ ಕನ್ನಡ ಚಿತ್ರ-ಕೆಜಿಎಫ್ ಚಾಪ್ಟರ್ 2 (Best Kannada Film – KGF: Chapter 2)
ಅತ್ಯುತ್ತಮ ಹಿಂದಿ ಚಿತ್ರ-ಗುಲ್ಮೋಹರ್-(Best Hindi Film – Gulmohar)
ವಿಶೇಷ ಉಲ್ಲೇಖ- ಗುಲ್ಮೋಹರ್ ಚಿತ್ರಕ್ಕಾಗಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್ ಚಿತ್ರಕ್ಕಾಗಿ ಸಂಜಯ್ ಸಲೀಲ್ ಜೌಧರಿ (Special Mentions – Manoj Bajpayee in Gulmohar, and Sanjoy Salil Chowdhury for Kalikhan)
ಅತ್ಯುತ್ತಮ ಆ್ಯಕ್ಷನ್ ನಿರ್ದೇಶಕ- ಕೆಜಿಎಫ್-2: Best Action Direction – KGF: Chapter 2
ಅತ್ಯುತ್ತಮ ನೃತ್ಯ ನಿರ್ದೇಶನ- ತಿರುಚಿತ್ರಬಲಮ್ (Best Choreography – Tiruchitrabalam)
ಅತ್ಯುತ್ತಮ ಸಾಹಿತ್ಯ – ಪೌಜಾ (Best Lyrics – Fouja)

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments