Friday, August 22, 2025
24.8 C
Bengaluru
Google search engine
LIVE
ಮನೆಜಿಲ್ಲೆಗಡಿ ಜಿಲ್ಲೆಯಲ್ಲೂ ಕನ್ನಡ ಫಲಕ ಕಡ್ಡಾಯ: ಕೋಲಾರ ಕರವೇ ಆಗ್ರಹ

ಗಡಿ ಜಿಲ್ಲೆಯಲ್ಲೂ ಕನ್ನಡ ಫಲಕ ಕಡ್ಡಾಯ: ಕೋಲಾರ ಕರವೇ ಆಗ್ರಹ

ಕೋಲಾರ : ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯ, ಕೋಲಾರ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಅಂಗಡಿ , ಮಾಲ್ ಸೇರಿದಂತೆ ಎಲ್ಲಾ ಕಡೆ 60% ಕನ್ನಡ ಬಳಕೆ ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿ ಕರವೇ ಜಿಲ್ಲಾದ್ಯಕ್ಷ ಮೇಡಿಹಾಳ ರಾಘವೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಹಾಗೂ ಕೋಲಾರ ತಹಸಿಲ್ದಾರ್ ರವರಿಗೆ ಮನವಿ ನೀಡಲಾಯಿತು .

ಕರ್ನಾಟಕದಲ್ಲಿ ಇತ್ತೀಚೆಗೆ ಕನ್ನಡ ಮಾಯವಾಗುತ್ತಿದೆ , ಹಾಗು ಕನ್ನಡ ಭಾಷೆ ಹೋರಾಟಗಾರರನ್ನು ಹತ್ತಿಕ್ಕುವ ಸಲುವಾಗಿ ಅವರ ಮೇಲೆ ಸುಳ್ಳು ಕೇಸುಗಳನ್ನು ಧಾಖಲಿಸುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಟಿ ನಾರಾಯಣಗೌಡ ಸ್ಥಾಪಿತ ಕರ್ನಾಟಕ ರಕ್ಷಣ ವೇದಿಕೆ ಬಣದ ಜಿಲ್ಲಾದ್ಯಕ್ಷ ಮೇಡಿಹಾಳ ರಾಘವೇಂದ್ರ ಮುಂದಾಳತ್ವ ದಲ್ಲಿ ನೂರಾರು ಮಹಿಳೆಯರು ಸೇರಿದಂತೆ ಕರವೇ ಕಾರ್ಯಕರ್ತರು ಕೋಲಾರ ನಗರದ ಗಾಂಧಿ ಚೌಕದಿಂದ ತಾಲ್ಲೂಕು ಕಚೇರಿ ವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ತಾಲ್ಲೂಕು ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಹರ್ಷವರ್ದನ್ ರವರಿಗೆ ಮನವಿ ನೀಡಿದರು.

ತಾಲ್ಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ತಲುಪಿ , ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕರವೇ ಮೇಡಿಹಾಳ ರಾಘವೇಂದ್ರ ಕಡ್ಡಾಯ ಕನ್ನಡ ನಾಫಲಕ ಜಾರಿಯಾಗಬೇಕು, ಟಿ.ನಾರಯಣಗೌಡರ ನಾಯಕತ್ವದ ಹೋರಾಟ ಪ್ರತಿಭಲವಾಗಿ ಶೇ60 ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ಸುಗ್ರಿವಾಜ್ಙೆ ಹೊರಡಿಸಿದೆ ನಿಯಮಾನುಸಾರ ಡಿಸೆಂಬರ್ ತಿಂಗಳಲ್ಲಿ ನಡೆದ ಹೋರಾಟವು ಕ್ರಾಂತಿ ರೂಪಕ್ಕೆ ಹೋದಾಗ ಆಂಗ್ಲ ನಾಮಫಲಕ ಕಿತ್ತೆಸೆದಿದ್ದರು. ಟಿ.ಎ ನಾರಾಯಣಗೌಡ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೋಲೀಸರು ಬಂದಿಸಿ 14 ದಿನಗಳ ಕಾಲ ಜೈಲಿನಲ್ಲಿಟ್ಟಿದ್ದರು.

ಪೆ.28 ರ ಒಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕದೇ ಇದ್ದರೆ ಕರವೇ ಬೀದಿಗಳಿದು ಆಂಗ್ಲ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯುವ ಮೂಲಕ ಕ್ರಾಂತಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಟಿ.ಎ. ನಾರಾಯಣಗೌಡ ಹಾಗೂ ಕರವೇ ಕಾರ್ಯತರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯದಿದ್ದಲ್ಲಿ ಮುಂದಿನ ಲೋಕಸಭ ಚುನಾವಣೆಯಲ್ಲಿ ಒಳ್ಳೆಯ ನಿರ್ದಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕನ್ನಡ ವಿಷಯ ಬಂದಾಗ ಕರವೇ ಕಾರ್ಯಕರ್ತರ ಕನ್ನಡಕ್ಕಾಗಿ ಕನ್ನಡ ಭಯೋದ್ಪಾಕರಾಗಲು ಸಿದ್ದ ಯಾವುದೇ ಕಾರಣಕ್ಕೂ ನಾರಾಯಣಗೌಡರ ಸಂಘಟನೆ ಕಾರ್ಯಕರ್ತರು ಕುಗ್ಗೋದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಕರವೇ ಜಿಲ್ಲಾದ್ಯಕ್ಷ ಮೇಡಿಹಾಳ ರಾಘವೇಂದ್ರ ಎಚ್ಚರಿಕೆ ನೀಡಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments