ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿರುವ ವರದಿ ಭಾರೀ ಚರ್ಚೆ ಹುಟ್ಟುಹಾಕಿದೆ. ಕನ್ನಡ ಚಿತ್ರರಂಗದಲ್ಲೂ ಇದೇ ಮಾದರಿಯ ಸಮಿತಿ ರಚನೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಚೇತನ್ ಅಹಿಂಸಾ ನೇತೃತ್ವದಲ್ಲಿ 153 ತಾರೆಯರು ಪತ್ರಕ್ಕೆ ಸಹಿ ಹಾಕಿದ್ದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಚೇತನ್ ಅಹಿಂಸಾ ನೇತೃತ್ವದ ಫೈರ್ ನಿಯೋಗ ಭೇಟಿ ಮಾಡಿತು. ಸ್ಯಾಂಡಲ್‌ವುಡ್‌ನಲ್ಲಿ ಕಲಾವಿದೆಯರ ಮೇಲೆ ಆಗುತ್ತಿರುವ ಶೋಷಣೆ ತಡೆಗಟ್ಟುವ ಸಂಬಂಧ ಸಮಿತಿ ರಚಿಸುವಂತೆ ಸಿಎಂ ಸಿದ್ದರಾಮಯ್ಯಗೆ ಫೈರ್ ನಿಯೋಗ ಮನವಿ ಮಾಡಿತು.
ಕೇರಳದ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಸಮಿತಿ ಮಾಡಲು ಒತ್ತಾಯ ಕೇಳಿಬಂದ ಬೆನ್ನಲ್ಲೇ ‘ಫೈರ್’ ಟೀಂ ಸಿಎಂ ಸಿದ್ದರಾಮಯ್ಯನವರಿಗೆ ಭೇಟಿ ಮಾಡಿದ್ದಾರೆ. ಈ ವೇಳೆ ನಟ ಚೇತನ್ ಅಹಿಂಸಾ, ಕವಿತಾ ಲಂಕೇಶ್, ಕವಿತಾ ಲಂಕೇಶ್, ನಟಿ ನೀತು, ಶೃತಿ ಹರಿಹರನ್ ಸೇರಿದಂತೆ ಇನ್ನೂ ಕೆಲವರು ಸಿಎಂ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ಅಹಿಂಸಾ, ಹಿರಿಯ ಪತ್ರಕರ್ತೆ ವಿಜಯಮ್ಮ, ನಿರ್ದೇಶಕಿ ಕವಿತಾ ಲಂಕೇಶ್, ಆಶಿಕಾ ರಂಗನಾಥ, ಶೃತಿ ಹರಿಹರನ್, ಅಮೃತ ಅಯ್ಯಂಗಾರ್, ಸಂಯುಕ್ತ ಹೆಗ್ಢ, ಪೂಜಾಗಾಂದಿ,
ಮಾನ್ವಿತಾ, ಧನ್ಯಾ ಸೇರಿ ಹಲವರಿಂದ ಮನವಿ ಪತ್ರಕ್ಕೆ ಸಹಿ ಹಾಕಿಸಿ ಕೇರಳದಂತೆ ಹೇಮಾ ಸಮಿತಿಯಂತೆ ಕಮಿಟಿಗೆ ರಚಿಸಲು, ಫೈರ್ ನಿಯೋಗ ಸಂಸ್ಥೆಯಿಂದ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಕೆ ಮಾಡಿದರು.
ಸೆಟ್ನಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಸೌಲಭ್ಯ ಒದಗಿಸಬೇಕು. ಹೆಣ್ಣು ಎಂಬ ಕಾರಣಕ್ಕೇ ಹಲವು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಅದನ್ನ ಮೊದಲು ತಪ್ಪಿಸಬೇಕು. ನಟಿಯರೂ ಸೇರಿದಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಸಮಾನತೆ. ಸುರಕ್ಷಿತ ವ್ರತ್ತಿಪರ ವಾತಾವರಣ ನಿರ್ಮಿಸುವ ದಿಕ್ಕಿನಲ್ಲಿ ಕೇರಳದ ನ್ಯಾ.ಹೇಮ ಸಮಿತಿಯ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನಿವೃತ್ತ ನ್ಯಾಯಾಧೀಶರ ನೇತ್ರತ್ವದಲ್ಲಿ ಸಮಿತಿ ರಚನೆ ಆಗಬೇಕು. ಕನ್ನಡ ಚಿತ್ರರಂಗದಲ್ಲಿನ ಸ್ಥಿತಿಗತಿಗಳ ಅಧ್ಯಯನ ನಡೆಸಿ, ನಿಗದಿತ ಕಾಲಮಿತಿಯಲ್ಲಿ ವರದಿ ಪಡೆದು, ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಲಿಂಗಸಂವೇದನೆಯುಳ್ಳವರ ನೇತೃತ್ವದಲ್ಲಿಯೇ ತನಿಖೆಯಾಗಬೇಕು. ಹೆಣ್ಮಕ್ಕಳನ್ನು ಕೀಳಾಗಿ, ಅಸಮಾನತೆಯಿಂದ ಕಂಡ ಪ್ರಮುಖರನ್ನ ತನಿಖೆಗೆ ಒಳಪಡಿಸಬೇಕು. ಅವಕಾಶಕ್ಕಾಗಿ ಕಮಿಟ್ಮೆಂಟ್ ಇರುತ್ತೆ ಎಂದು ದೌರ್ಜನ್ಯ ಎಸಗಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಕ್ಷೆಗೆ ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.