Thursday, May 1, 2025
30.3 C
Bengaluru
LIVE
ಮನೆ#Exclusive NewsTop Newsಎಲೆಕ್ಟ್ರಿಕ್ ಸ್ಕೂಟರ್ ನಮ್ಮ ತಲೆಯನ್ನೂ ಕೆಡಿಸುತ್ತೆ, ಇವಿ ಸಾಕಪ್ಪ ಸಾಕು ಎಂದ ನಟ ಶಂಕರ್!

ಎಲೆಕ್ಟ್ರಿಕ್ ಸ್ಕೂಟರ್ ನಮ್ಮ ತಲೆಯನ್ನೂ ಕೆಡಿಸುತ್ತೆ, ಇವಿ ಸಾಕಪ್ಪ ಸಾಕು ಎಂದ ನಟ ಶಂಕರ್!

ಬೆಂಗಳೂರು: ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ದುಬಾರಿ. ಆದರೆ ಒಮ್ಮೆ ಹೂಡಿಕೆ ಮಾಡಿದರೆ ಬಳಿಕ ಸುಲಭ. ದುಬಾರಿ ಪೆಟ್ರೋಲ್ ಬೇಕಿಲ್ಲ. ಕಿಲೋಮೀಟರ್‌ಗೆ 30 ಪೈಸೆ, 50 ಪೈಸೆ ಖರ್ಚು. ಸ್ಕೂಟರ್ ನಿರ್ವಹಣೆ ವೆಚ್ಚ ಕಡಿಮೆ. ಪರಿಸರಕ್ಕೂ ಪೂರಕ, ವಾಯು ಮಾಲಿನ್ಯವಿಲ್ಲ, ಶಬ್ದದ ಕಿರಿಕಿ ಇಲ್ಲ. ಈ ಎಲ್ಲಾ ಲೆಕ್ಕಾಚಾರದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ನಟ ಶಂಕರ್ ಅಶ್ವತ್ಥ್ ಇದೀಗ ಇವಿ ಸಹವಾಸೇ ಸಾಕು ಅಂತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಗ್ರಹಚಾರ ಕೆಟ್ರೆ ಎಲೆಕ್ಟ್ರಿಕ್ ಶಾಕ್ ಹೊಡೆಯುತ್ತೆ ಎಂದು ಶಂಕರ್ ಹೇಳಿದ್ದಾರೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಕೆಟ್ಟರೆ ಸಂಕಷ್ಟ ಒಂದೆರೆಡಲ್ಲ. ಸ್ಕೂಟರ್ ಕೆಡುವ ಜೊತೆಗೆ ನಮ್ಮ ತಲೆಯನ್ನೂ ಕೆಡಿಸುತ್ತೆ ಎಂದು ಶಂಕರ್ ಅಶ್ವತ್ಥ್ ಹೇಳಿದ್ದಾರೆ. ಈ ಕುರಿತ ಒಂದು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ತಾನೆ ಬಂದ ಸುದ್ದಿ ಎಂದು ಈ ಘಟನೆಯನ್ನು ಶಂಕರ್ ವಿವರಿಸಿದ್ದಾರೆ.

ಅಶ್ವತ್ ಬೆಂಗಳೂರಿಗೆ ಶೂಟಿಂಗ್ ಕಾರಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಮೈಸೂರಿನಲ್ಲಿರುವ ಶಂಕರ್ ಅಶ್ವತ್ಥ್ ಪತ್ನಿ ಕರೆ ಮಾಡಿ ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಆಗಿರುವ ಅವಾಂತರ ಹೇಳಿದ್ದಾರೆ. ನಾವು ಒಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದೇವೆ. ಆದರೆ ಈ ಸ್ಕೂಟರ್ ಕೆಟ್ಟು ಒಂದು ವಾರ ಆಗಿದೆ. ಗಾಡಿ ಚೆನ್ನಾಗಿದೆ. ಓಡಾಡುತ್ತಿದ್ದರೆ ಚೆನ್ನಾಗಿರುತ್ತದೆ. ಆದರೆ ಒಂದು ವೇಳೆ ಕೆಟ್ಟು ಹೋಯಿತು ಅಂದರೆ, ಸ್ಕೂಟರ್ ಕೆಡುವುದರ ಜೊತೆಗೆ ನಮ್ಮ ತಲೆಯನ್ನು ಕೆಡಿಸುತ್ತದೆ ಎಂದು ಶಂಕರ್ ಹೇಳಿದ್ದಾರೆ.

ಇವೆಲ್ಲಾ ನೋಡಿದರೆ ಈ ಪೆಟ್ರೋಲ್ ಗಾಡಿಗಳು ಇದೆಯಲ್ಲ ಅವೇ ಎಷ್ಟೋ ವಾಸಿ. ಶೇವಿಂಗ್ ಸೆಟ್ ಐದು ಬ್ಲೇಡ್, 6 ಬ್ಲೇಡ್ ಎಂದು ಜಾಹೀರಾತು ಕೊಡುತ್ತಾರಲ್ಲ, ಅವೆಲ್ಲಾ ನೋಡಲು ಮಾತ್ರ ಚಂದ. ಆ ಸಮಯಕ್ಕೆ ಎರಡು, ಎರಡೂವರೆ ಲಕ್ಷ ರೂಪಾಯಿ ಸುರಿದು ನಾವು ಗಾಡಿ ತಗೋಂಡು, 25 ಪೈಸೆಗೆ, 50 ಪೈಸೆಗೆ ಒಂದು ಕಿಲೋಮೀಟರ್ ಓಡಿಸಬಹುದು ಎಂದು ಲೆಕ್ಕ ಹಾಕುತ್ತೇವೆ. ಆದರೆ ಹೋಗ್ತಾ ಹೋಗ್ತಾ ನಿಮ್ಮ ತಲೆ ಗ್ಯಾರೆಂಟಿ ಕೆಡುತ್ತೆ. ಇದೇ ಈ ಎಲೆಕ್ಟ್ರಿಕ್ ಸ್ಕೂಟರ್ ಎಂದು ಶಂಕರ್ ಅಶ್ವತ್ಥ್ ಹೇಳಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments