ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಕಾರ್ಯಕರ್ತರು ಹಾಗೂ ಹಿತೈಷಿಗಳು ಒತ್ತಡ ಹಾಕುತ್ತಿದ್ದಾರೆ. ಪ್ರತಿದಿನ ನೂರಾರು ಬೆಂಬಲಿಗರು ಬಂದು ಭೇಟಿ ಮಾಡಿ, ಸ್ಪರ್ಧೆ ಮಾಡಲು ಹೇಳುತ್ತಿದ್ದಾರೆ.
ಹಾಗಾಗಿ ಜಗದೀಶ ಶೆಟ್ಟರವರಿಗೆ ಧಾರವಾಡ ಅಥವಾ ಹಾವೇರಿ ಟಿಕೆಟ್ ನೀಡಿದ್ದರೆ ಒಳ್ಳೆಯದು ಎಂದು ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅಣ್ಣನ ಪರ ಬ್ಯಾಟ್ ಬೀಸಿದ್ದಾರೆ. ಹುಬ್ಬಳ್ಳಿಯಲ್ಲಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಬಿಜೆಪಿಗೆ ಮರಳಿ ಬಂದ ನಂತರ, ಪ್ರತಿ ದಿನ ನೂರಾರು ಬೆಂಬಲಿಗರು ಹಾವೇರಿ ಧಾರವಾಡ ಲೋಕಸಭಾಗಳ ವ್ಯಾಪ್ತಿಯವರು ಬಂದು ಭೇಟಿ ಮಾಡಿ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದಾರೆ.
ಜೊತೆಗೆ ನಾವು ಕೂಡಾ ಈ ಹಿಂದೆ ಧಾರವಾಡ ಲೋಕಸಭಾ ಟಿಕೆಟ್ ಲಿಂಗಾಯತ ನಾಯಕರಿಗೆ ಕೊಡುವ ಕುರಿತು ಮಾತಾನಾಡಿದ್ವಿ. ಧಾರವಾಡ ಟಿಕೆಟ್ ನೀಡಿದ್ದರೆ ತುಂಬಾ ಒಳ್ಳೆಯದು. ಎರಡರಲ್ಲಿ ಒಂದು ಟಿಕೆಟ್ ನೀಡಿದ್ದರೆ ಅದನ್ನು ಸ್ವಾಗತ ಮಾಡುತ್ತೇವೆ. ಎರಡು ಕ್ಷೇತ್ರದಲ್ಲಿ ವೀರ ಶೈವ ಲಿಂಗಾಯತ ಓಟಗಳು ಸಂಖ್ಯೆ ಹೆಚ್ಚಾಗಿದೆ. ಸಮಾಜ ಎಲ್ಲ ಮುಖಂಡರು,ಸ್ಪರ್ಧೆ ಮಾಡಲು ಮನವಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಅಂತಿಮವಾಗಿ ಪಕ್ಷದ ಹೈಕಮಾಂಡ್ ಇದರ ಬಗ್ಗೆ ತೀರ್ಮಾಣ ತೆಗೆದುಕೊಳ್ಳುಬೇಕು. ಕಾರ್ಯಕರ್ತರ ಹಾಗೂ ಸ್ಥಳೀಯರ ಪಕ್ಷದ ಹಿತೈಷಿಗಳ ಅಭಿಪ್ರಾಯ ಪಡೆದ ಟಿಕೆಟ್ ನೀಡಿದ್ದರೆ ಪಕ್ಷಕ್ಕೂ ತುಂಬಾ ಒಳ್ಳೆಯದು. ಬೆಳಗಾವಿ ಜಿಲ್ಲೆಗಿಂತ ಧಾರವಾಡ ಹಾವೇರಿ ಕ್ಷೇತ್ರಗಳು ಜಗದೀಶ ಶೆಟ್ಟರ ಸ್ಪರ್ಧೆಗೆ ಉತ್ತಮವಾಗಿದೆ ಎಂದರು.
ಇದರ ಬಗ್ಗೆ ಪಕ್ಷದ ರಾಜ್ಯ ಅಧ್ಯಕ್ಷರ ಗಮನಕ್ಕೂ ತರುತ್ತೇನೆ, ಈಗ ಅವರು ದೆಹಲಿಯಲ್ಲಿ ಇದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಸ್ಥಳೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡುತ್ತೇನೆ ಎಂದು ಹೇಳುವ ಮೂಲಕ ಸ್ಥಳೀಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.