Thursday, September 11, 2025
27.5 C
Bengaluru
Google search engine
LIVE
ಮನೆ#Exclusive NewsTop Newsಬಿಡುಗಡೆ ಬಳಿಕವೂ ಸಾಕಷ್ಟು ಟೀಕೆ, ವಿಮರ್ಶೆಗೆ ಒಳಗಾದ ‘ಕಂಗುವ’ ಸಿನಿಮಾ

ಬಿಡುಗಡೆ ಬಳಿಕವೂ ಸಾಕಷ್ಟು ಟೀಕೆ, ವಿಮರ್ಶೆಗೆ ಒಳಗಾದ ‘ಕಂಗುವ’ ಸಿನಿಮಾ

ತಮಿಳಿನ ಸ್ಟಾರ್ ನಟ ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಭಾರಿ ನಿರೀಕ್ಷೆಗಳನ್ನು ಈ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಬಿಡುಗಡೆ ಆದ ಬಳಿಕ ಸಾಕಷ್ಟು ಟೀಕೆಗಳನ್ನು, ವಿಮರ್ಶೆಗಳನ್ನು ಸಿನಿಮಾ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಸಿನಿಮಾದ ಸೌಂಡ್ ಡಿಸೈನ್, ಸಿನಿಮಾದ ಉದ್ದ ಇನ್ನೂ ಕೆಲವು ಕಾರಣಗಳಿಗೆ ಸಿನಿಮಾ ಟೀಕೆಗಳಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಈಗ ಚಿತ್ರತಂಡ ‘ಕಂಗುವ’ ಸಿನಿಮಾಕ್ಕೆ ಕೆಲ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದು, ಕೆಲವು ದೃಶ್ಯಗಳನ್ನು ಕತ್ತರಿಸುವ ಜೊತೆಗೆ ಕೆಲವು ತಾಂತ್ರಿಕ ಬದಲಾವಣೆಗಳನ್ನು ಸಹ ಮಾಡಲಿದೆ.

ಸಿನಿಮಾವನ್ನು ಸುಮಾರು 12 ನಿಮಿಷಗಳ ಕಾಲ ಕಿರಿದು ಮಾಡಲಾಗುತ್ತಿದೆ. ‘ಕಂಗುವ’ ಸಿನಿಮಾದಲ್ಲಿ ಎರಡು ಭಾಗದ ಕತೆ ಇದೆ. ಒಂದು ಶತಮಾನಗಳಷ್ಟು ಹಿಂದಿನ ಕತೆ ಹಾಗೂ ಪ್ರಸ್ತುತ ಕಾಲದಲ್ಲಿ ನಡೆಯುವ ಕತೆ. ಈಗ ಪ್ರಸ್ತುತ ಕಾಲದ ಕತೆಯ 12 ನಿಮಿಷದ ದೃಶ್ಯಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದ ಸಿನಿಮಾದ ರನ್​ಟೈಂ ಕಡಿಮೆ ಆಗಲಿದ್ದು, ಕತೆಯ ವೇಗ ಹೆಚ್ಚಲಿದೆ. ಕತೆಯ ಆರಂಭದ ಕೆಲ ದೃಶ್ಯಗಳು ಅನವಶ್ಯಕವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದವು, ಹಾಗಾಗಿ ಈ ನಿರ್ಣಯವನ್ನು ಚಿತ್ರತಂಡ ತೆಗೆದುಕೊಂಡಿದೆ.

ದಿಶಾ ಪಟಾನಿಯ ಪಾತ್ರಕ್ಕೆ ಬಹುತೇಕ ಕತ್ತರಿ ಬೀಳಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿನಿಮಾದ ನಿರ್ಮಾಪಕ ಜ್ಞಾನವೇಲು ಅವರ ಪತ್ನಿ, ‘ದಿಶಾ ಪಟಾನಿಯ ಪಾತ್ರ ‘ಕಂಗುವ’ ಮೇಲೆ ಪರಿಣಾಮ ಬೀರುವ ಪಾತ್ರವಲ್ಲ. ಆಕೆಯ ಪಾತ್ರ ಇರುವುದು ಕೇವಲ ಸುಂದರವಾಗಿ ಕಾಣಲು ಅಷ್ಟೆ’ ಎಂದಿದ್ದರು. ದಿಶಾ ಪಾತ್ರಕ್ಕೆ ಕತ್ತರಿ ಹಾಕುವ ನಿರ್ಣಯವನ್ನು ಹೀಗೆ ಸಮರ್ಥಿಸಿಕೊಂಡಿದ್ದರು. ಇದು ಟೀಕೆಗೆ ಸಹ ಗುರಿಯಾಗಿತ್ತು. ನಟಿ ಜ್ಯೋತಿಕಾ ಸಹ ಇನ್​ಸ್ಟಾಗ್ರಾಂನಲ್ಲಿ ‘ಕಂಗುವ’ ಸಿನಿಮಾದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ‘ಸಿನಿಮಾ ತಾಂತ್ರಿಕವಾಗಿ ಬಹಳ ರಿಚ್ ಆಗಿದೆ, ಸೂರ್ಯ ಅದ್ಭುತವಾಗಿ ನಟಿಸಿದ್ದಾರೆ’ ಎಂದಿದ್ದಾರೆ.

ದೃಶ್ಯಗಳಿಗೆ ಕತ್ತರಿ ಹಾಕುವುದು ಮಾತ್ರವೇ ಅಲ್ಲದೆ, ಸಿನಿಮಾದ ಶಬ್ದವನ್ನು ಅಲ್ಲಲ್ಲಿ ಬದಲಾಯಿಸಲಾಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಬಹಳ ಲೌಡ್ ಆಗಿದೆ ಎಂದು ಪ್ರೇಕ್ಷಕರು ಟೀಕಿಸಿದ್ದರು. ಸ್ವತಃ ನಿರ್ಮಾಪಕರು ಸಹ ಚಿತ್ರಮಂದಿರಗಳ ಮಾಲೀಕರು ಸೌಂಡ್ ಕಡಿಮೆ ಇಟ್ಟು ಸಿನಿಮಾ ಪ್ರದರ್ಶಿಸಿ ಎಂದು ಮನವಿ ಮಾಡಿದ್ದರು. ಇದೀಗ ಚಿತ್ರತಂಡವೇ ಸಿನಿಮಾದ ಸೌಂಡ್ ಕಡಿಮೆ ಮಾಡಲಿದೆ. ಸಿನಿಮಾದ ರೀ ಎಡಿಟ್ ಮಾಡುತ್ತಿರುವ ಕಾರಣ ಇದೀಗ ಸಿನಿಮಾವನ್ನು ಮರು ಸೆನ್ಸಾರ್ ಸಹ ಮಾಡಿಸಲಾಗುತ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments