ಬೆಂಗಳೂರು :ಬಾಬಿ ಡಿಯೋಲ್ ಅವರಿಗೆ ‘ಅನಿಮಲ್’ ಸಿನಿಮಾ ಮರುಜನ್ಮ ನೀಡಿದೆ ಎಂದರೂ ತಪ್ಪಾಗಲಾರದು. ಹೊಸ ಹೊಸ ಆಫರ್ಗಳು ಬಾಬಿಯನ್ನು ಹುಡುಕಿ ಬರುತ್ತಿವೆ. ಇಂದು ಅವರಿಗೆ ಜನ್ಮದಿನದ ಸಂಭ್ರಮ. ಈ ಪ್ರಯುಕ್ತ ‘ಕಂಗುವ’ ಸಿನಿಮಾದ ಅವರ ಲುಕ್ ರಿವೀಲ್ ಆಗಿದೆ. ಈ ಸಿನಿಮಾದಲ್ಲಿನ ಅವರ ಲುಕ್ ಸಖತ್ ಭಯಾನಕವಾಗಿದೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಫೋಟೋಗೆ ನಾನಾ ಕಮೆಂಟ್ಗಳು ಬರುತ್ತಿವೆ.
ಬಾಬಿ ಡಿಯೋಲ್ ಅವರು ‘ಅನಿಮಲ್’ ಚಿತ್ರದಲ್ಲಿ ಮಾಡಿದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಒಂದೇ ಒಂದು ಡೈಲಾಗ್ ಇಲ್ಲದೆ ಇದ್ದರೂ ಅವರ ಪಾತ್ರ ಗಮನ ಸೆಳೆದಿತ್ತು. ಈಗ ಬಾಬಿ ಡಿಯೋಲ್ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಅನಿಮಲ್’ ಬಳಿಕ ಅವರು ‘ಕಂಗುವ’ ಚಿತ್ರದ ಮೂಲಕ ಮತ್ತೊಂದು ರಗಡ್ ಅವತಾರದಲ್ಲಿ ಬರೋಕೆ ರೆಡಿ ಆಗಿದ್ದಾರೆ. ಹ್ಯಾಪಿ ಬರ್ತಡೇ ಬಾಬಿ.