Friday, August 22, 2025
20.8 C
Bengaluru
Google search engine
LIVE
ಮನೆUncategorizedಸರಣಿ ಆತ್ಮಹತ್ಯೆಗಳಿಂದ ಸುದ್ದಿ ಮಾಡುತ್ತಿದೆ ರಾಜ್ಯದ ಕಂದಾಯ ಇಲಾಖೆ

ಸರಣಿ ಆತ್ಮಹತ್ಯೆಗಳಿಂದ ಸುದ್ದಿ ಮಾಡುತ್ತಿದೆ ರಾಜ್ಯದ ಕಂದಾಯ ಇಲಾಖೆ

ಕನಕಪುರ : ಸರಣಿ ಆತ್ಮಹತ್ಯೆಗಳಿಂದ ರಾಜ್ಯದ ಕಂದಾಯ ಇಲಾಖೆ ಸುದ್ದಿ ಮಾಡುತ್ತಿದೆ. ಮೊನ್ನೆ ಚಳ್ಳಕೆರೆಯಲ್ಲಿ ಒಂದು ಆತ್ಮಹತ್ಯೆ ಇವತ್ತು ಕನಕಪುರ ತಾಲೂಕು ಕಚೇರಿಯಲ್ಲೇ ಶಿರಸ್ತೆದಾರ ಸುರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು, ಕಚೇರಿಯ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಸಾವಿಗೆ ಶರಣಾದ ಶಿರಸ್ತೆದಾರ್, ಕನಕ್ಪುರ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು, ಕಂದಾಯ ಇಲಾಖೆಯಲ್ಲಿ ಸುದರ್ದ ಸೇವೆ ಸಲ್ಲಿಸಿದ 50 ವರ್ಷದ ಸುರೇಶ್, ಕಳೆದು ತಿಂಗಳು ಚಳ್ಳಕೆರೆ ತಹಶೀಲ್ದಾರ್ ಕಚೇರಿಯ ನೌಕರ ಸಿಎಂ ಗುರುಲಿಂಗಣ್ಣ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. 32 ವರ್ಷ ಸೇವೆ ಸಲ್ಲಿಸಿದ ಗುರುಲಿಂಗಣ್ಣ ಕೂಡ ಚುನಾವಣಾ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದು ತಿಂಗಳು ಚಳ್ಳಕೆರೆ ತಹಶೀಲ್ದಾರ್ ಕಚೇರಿಯ ನೌಕರ ಸಿಎಂ ಗುರುಲಿಂಗಣ್ಣ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅದಲ್ಲದೇ, ಕೆಲಸದ ಒತ್ತಡ ನೆಪ ಹೇಳಿ ಆತ್ಮಹತ್ಯೆಗೆ ಮುಂದಾಗುತ್ತಿರುವ ಸಿಬ್ಬಂದಿ ನೌಕರರು, ಪಕ್ಕ ರೂಲ್ ಮೈನ್ಡೆಡ್ ಮಂತ್ರಿ ಇಲಾಖೆಯಲ್ಲಿ ಸ್ಯೂಸೈಡ್ಗಳು ನಡೆಯುತ್ತಿರುವುದೇಕೆ, ಒಂದೆಡೆ ರಿಯಲ್ ಎಸ್ಟೇಟ್ ಎಸ್ಟೇಟ್ ಮಾಫಿಯಾ ಭೂಗಳ್ಳರ ಒತ್ತಡ, ಮತ್ತೊಂದಡೆ ಮೇಲಿಂದ ಮೇಲೆ ಟಾರ್ಗೆಟ್ ಫಿಕ್ಸ್ ಮಾಡುತ್ತಿರುವ ಸರ್ಕಾರ, ಯಾಕೆಯಲ್ಲಿ ಕಾಡುತ್ತಿರುವ ನೌಕರರ ನೇಮಕಾತಿ ಸಮಸ್ಯೆ, ಇದೆಲ್ಲದರ ಮಧ್ಯೆ ಒತ್ತಡಕ್ಕೆ ಸಿಲುಕುತ್ತಿದ್ದಾರಾ ಕಂದಾಯ ಇಲಾಖೆ ನೌಕರರು, ಸಿಬ್ಬಂದಿ ನೇಮಕಾತಿಯಾಗದೆ ಕಂದಾಯ ಇಲಾಖೆ ತತ್ತರಿಸುತ್ತಿದೆ.

ಈ ಮಧ್ಯೆ ಹೋದಲ್ಲಿ ಬಂದಲ್ಲಿ ಸಚಿವರ ಖಡಕ್ ವಾರ್ನಿಂಗ್ಗಳು, ಸಚಿವರ ಆರ್ಡರ್ ಆರ್ಭಟಕ್ಕೆ ಇಲಾಖೆಯಲ್ಲಿ ಅಸಮಾಧಾನದ ಹೊಗೆ, ಜೊತೆಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ, ತಹಸಿಲ್ದಾರ್ ಎಸಿ ಡಿಸಿ ಆರ್ ಸಿ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ, ಒಂದೆಡೆ ಸಿಬ್ಬಂದಿ ಕೊರತೆ ಕಾರಣ ಕೆಲಸಗಳು ಆಗುತ್ತಿಲ್ಲ. ಮತ್ತೊಂದೆಡೆ ಹಿರಿಯರ ಭ್ರಷ್ಟಾಚಾರದ ಕಾರಣಕ್ಕೆ ಫೈಲ್ ಗಳು ಮೂವ್ ಆಗುತ್ತಿಲ್ಲ, ಇನ್ನೊಂದೆಡೆ ಭೂ ಅಕ್ರಮ ಎಸಗುವವರ ಕಾರುಬಾರುಗಳ ಮಧ್ಯೆ ಕೆಲಸ ಮಾಡುವುದು ದುಸ್ಥರವಾಗಿದೆ. ಇಲಾಖೆಯ ಕಿರಿಯ ಅಧಿಕಾರಿನೌಕರರ ಕಥೆ ಕೇಳುವವರು ಇಲ್ಲವಾಗಿದೆ.

ಇದೆಲ್ಲ ಸಮಸ್ಯೆಗಳ ಮಧ್ಯೆ ಸಚಿವ ಕೃಷ್ಣಭೈರೇಗೌಡರುದು ಹೋದಲ್ಲಿ ಬಂದಲ್ಲಿ ರಣಾರ್ಭಟ, ಸಚಿವರು ಭ್ರಷ್ಟಾಚಾರ ತಡೆಗೆ ದಾರಿಗಳನ್ನು ಹುಡುಕುತ್ತಿಲ್ಲ. ವಿ ಎ ಆರ್ ಐ ತಹಶೀಲ್ದಾರ್ ಎಸಿಡಿಸಿಗಳ ನೇಮಕದಲ್ಲಿ ಕರಪ್ಶನ್ ನಿಂತಿಲ್ಲ. ಜನಸಾಮಾನ್ಯರ ಕಷ್ಟಕೋಟಲೆಗಳಿಗೆ ಮುಕ್ತಿ ಸಿಗುವ ಲಕ್ಷಣಗಳೇ ಇಲ್ಲ. ಆದರೆ ಸಚಿವರ ಲೈವ್ ಶೋಗಳು ಇಲಾಖೆಯಲ್ಲಿ ಬಾರಿ ಸದ್ದು ಮಾಡುತ್ತಿವೆ. ನೌಕರರ ಆತ್ಮಹತ್ಯೆಗಳ ತಡೆಗೆ ಕೂಡಲೇ ಗಮನ ಹರಿಸಿ ಮಂತ್ರಿಗಳೇ? ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸುತ್ತಾ ಗಮನಹರಿಸಿ ಸಚಿವರೇ, ಇಲಾಖೆಯಲ್ಲಿ ಬೇರು ಬಿಟ್ಟಿರುವ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಿ ಸಚಿವರೇ,ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲಗೆ ಕ್ರಮ ಕೈಗೊಳ್ಳಿ ಸಚಿವರೇ? ಪೋಡಿ ಅಭಿಯಾನ ಹಳ್ಳ ಹಿಡಿದಿದೆ. ರೈತರ ಜಮೀನುಗಳಿಗೆ ಖಾತೆ ಪಹಣಿ ಮಾಡಿಕೊಡಲು ಅಧಿಕಾರಿಗಳು ಜಮೀನಿನ ಒಂದು ಭಾಗವನ್ನೇ ಲಂಚವಾಗಿ ಕೇಳುತ್ತಿದ್ದಾರೆ. ಒಬ್ಬೊಬ್ಬ ಅಧಿಕಾರಿಗಳ ಮೇಲೆ ಹತ್ತಾರು ಪ್ರಕರಣಗಳಿವೆ. ಅವರಿಗೂ ಅಲವತ್ತಾದ ಹುದ್ದೆ ನೀಡಿಲಾಗಿದೆ. ಹಲವು ಅಧಿಕಾರಿಗಳ ಮೇಲೆ ವಿಚಾರಣೆ ಬಾಕಿ ಇದೆ. ಭ್ರಷ್ಟರನ್ನು ಆಯ್ಕಟಿನ ಹುದ್ದೆಗೆ ಕೂರಿಸುವುದನ್ನು ಮೊದಲು ನಿಲ್ಲಿಸಿ ಸಚಿವರೆ. ಹಂತದ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುವುದನ್ನು ಕೂಡಲೇ ತಪ್ಪಿಸಿ ಸಚಿವರೇ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments