Thursday, May 1, 2025
28.8 C
Bengaluru
LIVE
ಮನೆಸಿನಿಮಾಕಮಲ್ ಹಾಸನ್ ಲೀಲಾವಳಿ.. ಏಕಕಾಲದಲ್ಲಿ ಆರು ಹೀರೋಯಿನ್ ಗಳ ಜೊತೆ ಲವ್ ಟ್ರ್ಯಾಕ್.. ನಿಜನಾ?

ಕಮಲ್ ಹಾಸನ್ ಲೀಲಾವಳಿ.. ಏಕಕಾಲದಲ್ಲಿ ಆರು ಹೀರೋಯಿನ್ ಗಳ ಜೊತೆ ಲವ್ ಟ್ರ್ಯಾಕ್.. ನಿಜನಾ?

ಸಕಲಕಲಾ ವಲ್ಲಭ, ಅಭಿಜಾತ ಕಲಾವಿದ ಕಮಲ್ ಹಾಸನ್ ವೈಯಕ್ತಿಕ ಮತ್ತು ಸಂಸಾರಿಕ ಬದುಕಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಕಮಲ್ ಹಾಸನ್ ಅವರ ಕುರಿತಾಗಿ ಕೋಲಿವುಡ್ನ ಹಿರಿಯ ನಟಿ ಕುಟ್ಟಿ ಪದ್ಮಿನಿ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಾಕಿಂಗ್ ವಿಚಾರಗಳನ್ನು ಬಯಲು ಮಾಡಿದ್ದಾರೆ.

ಕುಟ್ಟಿ ಪದ್ಮಿನಿ ಮಾತನಾಡುತ್ತಾ, ಕಮಲ್ ಹಾಸನ್.. ಶ್ರೀವಿದ್ಯಾ, ರೇಖ, ಜಯಸುಧಾ, ವಾಣಿ ಗಣಪತಿ ಸೇರಿ ಒಟ್ಟು ಆರು ನಟಿಯರ ಜೊತೆ ಏಕಕಾಲದಲ್ಲಿ ಪ್ರೇಮ ವ್ಯವಹಾರ ನಡೆಸಿದ್ದರು. ಕೊನೆಗೆ ವಾಣಿ ಗಣಪತಿಯನ್ನು ಮದುವೆಯಾದರು. ಇವರ ಈ ಮದುವೆ ಶ್ರೀದೇವಿ, ಶ್ರೀವಿದ್ಯಾರನ್ನು ಅಚ್ಚರಿಗೆ ದೂಡಿತ್ತು.

ಶ್ರೀವಿದ್ಯಾ ಕಮಲ್ ಹಾಸನ್ ರನ್ನು ಎಷ್ಟೋ ಇಷ್ಟಪಟ್ಟಿದ್ದರು. ಕಮಲ್ ಜೊತೆ ಸಪ್ತಪದಿ ತುಳಿಯಲು ಬಯಸಿದ್ದರು. ಆದರೆ, ವಾಣಿ ಗಣಪತಿ ಜೊತೆ ಕಮಲ್ ಹಾಸನ್ ಮದುವೆ ಆಗಿದ್ದಕ್ಕೆ ಶ್ರೀವಿದ್ಯಾ ಮನೋವೇದನೆಗೆ ಗುರಿಯಾದರು. ನಾನು ಕಮಲ್ ಜೊತೆ ತೆಲುಗು ಸಿನಿಮಾದಲ್ಲಿ ನಟಿಸುವಾಗ ಅವರು ಮತ್ತು ವಾಣಿಯ ಲವ್ ಟ್ರ್ಯಾಕ್ ಶುರುವಾಯಿತು. ವಾಣಿಗಾಗಿ ಏರ್ಪೋರ್ಟ್ನಲ್ಲಿ ಗಿಫ್ಟ್ ಕೂಡ ಖರೀದಿ ಮಾಡಿದ್ದರು. ನಂತರ ಮದ್ರಾಸ್ ಗೆ ಸೇರಿದ ನಟಿ ರೇಖಾ ಜೊತೆ ಪ್ರೇಮಾಯಣವನ್ನು ಕಮಲ್ ಹಾಸನ್ ನಡೆಸಿದ್ದರು. ಈ ವಿಚಾರವನ್ನು ನಾನು ನೇರವಾಗಿ ಶ್ರೀವಿದ್ಯಾ ಗಮನಕ್ಕೆ ತಂದೆ. ಆದರೆ, ಅವರು ನಂಬಲಿಲ್ಲ. ಕಮಲ್ ಹಾಸನ್ಗೆ ಸಕಲ ಕಲಾ ವಲ್ಲಭ ಎಂಬ ಬಿರುದು ಬರಲು ಇದೇ ಕಾರಣ ಎಂದು ಕುಟ್ಟಿ ಪದ್ಮಿನಿ ತಿಳಿಸಿದ್ದಾರೆ.

ಕಮಲ್ ಹಾಸನ್ ವಾಣಿ ಗಣಪತಿಯನ್ನು ಮದುವೆಯಾದ ನಂತರವೂ ಶ್ರೀವಿದ್ಯಾ ವಾಸ್ತವವನ್ನು ಒಪ್ಪಲಾಗದೇ ತೀವ್ರ ಒತ್ತಡಕ್ಕೆ ಗುರಿಯಾದರು.. ಕೆಲ ವರ್ಷಗಳ ನಂತರ ಜಾರ್ಜ್ ಎಂಬುವವರನ್ನು ಮದುವೆಯಾದರೂ, ಅದು ತುಂಬಾ ದಿನ ಉಳಿಯಲಿಲ್ಲ. ಕೊನೆಗೆ ಸಿನಿಮಾಗಳಿಂದ ದೂರ ಉಳಿದ ಶ್ರೀವಿದ್ಯಾ ತಿರುವನಂತಪುರದಲ್ಲಿ ಸೆಟಲ್ ಆದರು. ತಮ್ಮ ಸಂಪೂರ್ಣ ಆಸ್ತಿಯನ್ನು ಟ್ರಸ್ಟ್ ಒಂದಕ್ಕೆ ಬರೆದುಕೊಟ್ಟರು. ನಂತರ ಶ್ರೀವಿದ್ಯಾಗೆ ಕ್ಯಾನ್ಸರ್ ರೋಗ ಕಾಡಿತು. 2006ರಲ್ಲಿ ಅವರು ಮರಣಿಸಿದರು ಎಂದು ಕುಟ್ಟಿ ಪದ್ಮಿನಿ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments