ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜಾಮೀನು ಸಿಕ್ಕ ಬಗ್ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಟ್ಟದ್ದು ಬರೋದೇ ಒಳ್ಳೆಯ ದಾರಿಗೆ ಕರೆದುಕೊಂಡು ಹೋಗೋಕೆ ಎಂದಿದ್ದಾರೆ.
ಶ್ರೀಮುರಳಿ ಕೆಟ್ಟದ್ದು ಬರೋದೇ ಒಳ್ಳೆಯ ದಾರಿಗೆ ಕರೆದುಕೊಂಡು ಹೋಗೋಕೆ ಜೊತೆಗೆ ಒಳ್ಳೆಯ ದಿನಗಳನ್ನು ತೋರಿಸೋಕೆ ಎಂದಿದ್ದಾರೆ. ಬಹುಶಃ ಏನೇ ನೋವಾಗಿದ್ರೂ ಇವತ್ತು ಎಲ್ಲರಿಗೂ ನೆಮ್ಮದಿ ಹಾಗೂ ಸಮಾಧಾನ ಸಿಕ್ಕಿದೆ. ಎಲ್ಲಾ ಕಡೆ ಹೇಳಿದ್ದೀನಿ, ಮತ್ತೊಮ್ಮೆ ಹೇಳ್ತಿದ್ದೀನಿ ಕಾಲಾಯ ತಸ್ಮೈ ನಮಃ ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ.ದರ್ಶನ್ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಅವರು ಆಸ್ಪತ್ರೆಯಿಂದ ಬಂದ್ಮೇಲೆ ಭೇಟಿ ಮಾಡುತ್ತೇನೆ ಎಂದು ಶ್ರೀಮುರಳಿ ಮಾತನಾಡಿದ್ದಾರೆ.