ಜಿಲ್ಲೆ

ಕಲಬುರಗಿ ಜಿಲ್ಲೆ ’ರಿಪಬ್ಲಿಕ್​ ಖರ್ಗೆ’ ಯಾಗಿದೆ : ಬಿ.ವೈ.ವಿಜಯೇಂದ್ರ

ಬೀದರ್​ : ಕಲಬುರಗಿ ಜಿಲ್ಲೆ ‘ರಿಪಬ್ಲಿಕ್​ ಖರ್ಗೆ’ ಜಿಲ್ಲೆಯಾಯಾಗಿದೆ ಎಂದು ಬೀದರ್​ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರನ್ನ ಚಿತ್ತಾಪೂರ ಪ್ರವಾಸಿ ಮಂದಿರದಲ್ಲಿ ಕೂಡಿ ಹಾಕಿ ಪ್ರಿಯಾಂಕ್​ ಖರ್ಗೆ ಆಪ್ತರು ಹಾಗೂ ಕಾಂಗ್ರೆಸ್​ ಪುಡಾರಿಗಳು ಹಲ್ಲೆ ನಡೆಸಿದ್ದಾರೆ.ಈ ಗೂಂಡಾಗರ್ತಿ, ಪಾಳೆಗಾರಿಕೆಯನ್ನು ವಿರೋಧಿಸಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಮಾಡ್ತಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ದಲಿತ ಮುಖಂಡ ಹಾಗೂ ವಿಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಚಿತ್ತಾಪುರದಲ್ಲಿ 4 ಗಂಟೆ ಕೂಡಿ‌ ಹಾಕಿದ್ದಾರೆ.ಮತ್ತೊಬ್ಬ ದಲಿತರ ಬೆಳವಣಿಗೆಯನ್ನ ಸಹಿಸಲು ಸಾಧ್ಯವಾಗುತ್ತಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಆತ್ಮಹತ್ಯೆ, ಕೊಲೆ, ಮರಳು ದಂಧೆ ನಡೆಯುತ್ತಿವೆ.ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ಹೊರ ಹಾಕಿದರು.

10 ರಿಂದ 15 ಸಾವಿರ ಜನರ ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಕಲಬುರಗಿ ರಿಪಬ್ಲಿಕ್ ಖರ್ಗೆ ಆಗಿದೆ ಅಂತಾ ಜನಸಾಮಾನ್ಯರು ಮಾತನಾಡ್ತಿದ್ದಾರೆ.ಪೊಲೀಸ್ ಇಲಾಖೆ ಒಂದು ಕುಟುಂಬದ ಅಡಿಯಾಳಾಗಿ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಭಟನೆಯಲ್ಲಿ ಉತ್ತರ ಕೊಡ್ತೀನಿ ಎಂದು ಸಚಿವ ಖರ್ಗೆ ವಿರುದ್ದ ಕಿಡಿ ಕಾರಿದರು.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದೇವೆ ಎಂಬ ಹೆಗ್ಗಳಿಕೆ ಬಿಟ್ರೆ ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಗೂಂಡಾಗರ್ತಿ ಕೆಲಸ ಜಾಸ್ತಿ ಆಗುತ್ತಿದೆ.ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ.ಗ್ಯಾರಂಟಿ ನೀಡಿದ್ದೇವೆ ಅಂತಾ ನಿರ್ಲಕ್ಷ್ಯ ತೋರುತ್ತಿದ್ದಾರೆ.ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ಅನುದಾನ ಕೊಡದಂತಹ ದುಷ್ಟ ಸರ್ಕಾರ ರಾಜ್ಯದಲ್ಲಿದೆ.ದುಷ್ಟ, ಗೂಂಡಾಗರ್ತಿ ಮಾಡುವ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೇವೆ. ಚಲವಾದಿ ನಾರಾಯಣಸ್ವಾಮಿ ಅವರನ್ನ ಕೂಡಿ ಹಾಕಿ ಅವಮಾನಿಸಿದ್ದಕ್ಕೆ ಕಾಂಗ್ರೆಸ್ ಉತ್ತರಿಸಲಿ ಎಂದು ಕಾಂಗ್ರೆಸ್​ ಸರ್ಕಾರಕ್ಕೆ ಪ್ರಶ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ.

Comments (0)

Your email address will not be published. Required fields are marked *

Back to top button