#Exclusive NewsTop Newsಜಿಲ್ಲೆಸುದ್ದಿ

ಕಲಬುರಗಿ : ಅನ್ಯಕೋಮಿನ ಯುವಕನ ಕಿರುಕುಳದಿಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ..!

  • ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಖಂಡಿಸಿ ಜೇವರ್ಗಿ ಬಂದ್..!
  • ಅನ್ಯಕೋಮಿನ ಯುವಕನ ಕಿರುಕುಳದಿಂದ ಆತ್ಮಹತ್ಯೆ ..!
  • ವೀರಶೈವ ಲಿಂಗಾಯತ ಸಮಾಜದಿಂದ ಬಂದ್ ಗೆ ಕರೆ..!
  • ಬೆಳಗ್ಗೆ 7 ಗಂಟೆಯಿಂದ ಜೇವರ್ಗಿ ಪಟ್ಟಣ ಬಂದ್..!

ಕಲಬುರಗಿ :  ಅನ್ಯಕೋಮಿನ ಯುವಕನ ಕಿರುಕುಳ ತಾಳಲಾರದೇ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಖಂಡಿಸಿ ಇಂದು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಬಂದ್‌ಗೆ ಕರೆ ಕೊಡಲಾಗಿದೆ.

https://youtu.be/hIN0TI1xkiU

ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಟನಾಕಾರರು ಬೆಳ್ಳಂಬೆಳಗ್ಗೆ 6 ಗಂಟೆಯಿಂದಲೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಜೇವರ್ಗಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ, ಬಸವೇಶ್ವರ ಸರ್ಕಲ್ ಹಾಗೂ ಇತರೆಡೆ ಮುಖ್ಯ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.ಜೇವರ್ಗಿಯಲ್ಲಿ ಹೋಟೆಲ್, ಕಿರಾಣಿ ಅಂಗಡಿಗಳು ಸೇರಿದಂತೆ ವ್ಯಾಪಾರೋದ್ಯಮ ಸಹ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಮಾಡಲಾಯಿತು.ಮುಂಜಾಗ್ರತಾ ಕ್ರಮವಾಗಿ ಜೇವರ್ಗಿ ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

 

ಸಾವಿಗೆ ಕಾರಣ :

ಜೇವರ್ಗಿ ತಾಲೂಕಿನಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 14 ವರ್ಷದ ಬಾಲಕಿಗೆ ಕಳೆದ ಹಲವು ದಿನಗಳಿಂದ ಆಟೋ ಚಾಲಕ ಮೆಹಬೂಬ್ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ, ಆತನ ಕಿರುಕುಳ ತಾಳಲಾರದೇ ನೇಣುಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನೂ ಬಾಲಕಿ ಸಾವಿಗೆ ನ್ಯಾಯ ಸಿಗಬೇಕು ಎಂದು ಘಟನೆಯನ್ನು ಖಂಡಿಸಿ ಜೇವರ್ಗಿ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದಿಂದ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು.

Comments (0)

Your email address will not be published. Required fields are marked *

Back to top button