Sunday, December 7, 2025
23.6 C
Bengaluru
Google search engine
LIVE
ಮನೆ#Exclusive NewsTop Newsಪ್ರಿಯಾಂಕ್​ ಖರ್ಗೆ ವಿರುದ್ಧ ಕೆ.ಎಸ್​ ಈಶ್ವರಪ್ಪ ವಾಗ್ದಾಳಿ

ಪ್ರಿಯಾಂಕ್​ ಖರ್ಗೆ ವಿರುದ್ಧ ಕೆ.ಎಸ್​ ಈಶ್ವರಪ್ಪ ವಾಗ್ದಾಳಿ

ಕಲಬುರಗಿ: ಸಿಂಗಂದೂರು ಸೇತುವೆ, ಸಿದ್ದರಾಮಯ್ಯ 5 ವರ್ಷ ಸಿಎಂ ಘೋಷಣೆ, ಹಾಗೂ ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲದ ಕುರಿತು ಕಲಬುರಗಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್​ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

RSS ವಿರುದ್ಧ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಮಾತನಾಡಿದ ಅವರು ಆರ್‌ಎಸ್‌ಎಸ್ ಇರುವುದರಿಂದಲೇ ದೇಶದಲ್ಲಿ ಹಿಂದುತ್ವ ಉಳಿದಿದೆ. ಪ್ರಿಯಾಂಕ್ ಖರ್ಗೆಗೆ ಹಿಡಿದ ಹುಚ್ಚು ವಾಸಿ ಮಾಡಲು ಪ್ರಪಂಚದಲ್ಲಿ ಯಾವ ಆಸ್ಪತ್ರೆ ಇಲ್ಲ. ಪ್ರಿಯಾಂಕ್ ಖರ್ಗೆಗೆ ಇಲ್ಲ RSS ಬಗ್ಗೆ ಮಾತಾಡೋಕೆ ಯಾವ ಹಕ್ಕಿದೆ ಎಂದು ವಾಗ್ದಾಳಿ ನಡೆಸಿದ್ರು.

ಬಿಜೆಪಿಯಲ್ಲಿಯೂ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಧ್ಯಕ್ಷ ಆಯ್ಕೆ ಆಗಬೇಕಿತ್ತು ಇನ್ನೂ ಆಗಿಲ್ಲ. ನಮಗೂ ಕೆಲವೊಂದು ವಿಳಂಬಗಳಿವೆ. ಆದರೆ ಅದು ಸಂಘಟನೆಯ ಅಂತರಂಗದ ವಿಚಾರ. ಬಿಜೆಪಿಯಲ್ಲೂ ಗೊಂದಲ ಇದೆ. ಗೊಂದಲ ಇಲ್ಲ ಅಂತಾ ಹೇಳಿಲ್ಲ ಎಂದರು.

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಿಎಂಗೆ ಆಹ್ವಾನ ನೀಡಿಲ್ಲ ಎಂಬ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ದೊಡ್ಡ ಕಾಮಗಾರಿಗೆ ರಾಜಕೀಯ ವಿಭಜನೆಯಿಂದ ಮೀರಿ ಶ್ಲಾಘನೆ ಬೇಕಾಗುತ್ತದೆ. ಪ್ರೋಟೋಕಾಲ್ ಉಲ್ಲಂಘನೆ ಆಗಬಾರದು. ಸೇತುವೆಯ ಉದ್ಘಾಟನೆಗೆ ಸಂಬಂಧಪಟ್ಟಂತೆ ಎಲ್ಲ ಪಕ್ಷಗಳಿಗೂ ಸೇರಿರುವ ಕ್ರೆಡಿಟ್ ಆಗಿದೆ ಎಂದ್ರು.

ಸಿದ್ದರಾಮಯ್ಯ ಅವರ ನಾನು ಐದು ವರ್ಷ ಸಿಎಂ ಆಗುತ್ತೇನೆ ಎಂಬ ಹೇಳಿಕೆಗೆ ಈಶ್ವರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದರು. ದೇಶದಾದ್ಯಂತ ಕಾಂಗ್ರೆಸ್ ನಾಶವಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಜೀವ ಉಳಿದಿದೆ. ಮುಖ್ಯಮಂತ್ರಿಯಾಗಿ ಯಾವ ಹುದ್ದೆ ಘೋಷಣೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಬೇಕು. ಸಿಎಂ ಆಗಿ ನೀವು ತಮ್ಮ ತಾವೇ ಘೋಷಣೆ ಮಾಡಿಕೊಳ್ಳುವುದು ಸರಿ ಅಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದ ಕಾರಣ, ಗೊಂದಲ ಉಂಟಾಗಿದೆ ಎಂದ್ರು.

ಕೇಂದ್ರದ ಹಿಂದುಳಿದ ವರ್ಗ ಸಮಿತಿಯಲ್ಲಿ ಸಿದ್ದರಾಮಯ್ಯ ಸೇರಿ ಮೂವರು ಇದ್ದರೂ, ಹಿಂದುಳಿದರಿಗೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಹಿಂದುಳಿದವರ ಹೆಸರಿನಲ್ಲಿ ಸಿಎಂ ಆಗಿದ್ದರೂ, ಕೆಲಸಗಳಿಲ್ಲ ಎಂದು ಕಿಡಿಕಾರಿದ್ರು..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments