Wednesday, February 11, 2026
26.6 C
Bengaluru
Google search engine
LIVE
ಮನೆUncategorizedಲೋಕೋಪಯೋಗಿ ಇಲಾಖೆ ಸೌತ್ ಸರ್ಕಲ್ CE ಆಗಿ ಕೆ.ಸಿ.ಸತೀಶ್ ನೇಮಕ

ಲೋಕೋಪಯೋಗಿ ಇಲಾಖೆ ಸೌತ್ ಸರ್ಕಲ್ CE ಆಗಿ ಕೆ.ಸಿ.ಸತೀಶ್ ನೇಮಕ

ಲೋಕೋಪಯೋಗಿ ಇಲಾಖೆಯ ಅತ್ಯಂತ ಪ್ರಮುಖವಾದ ‘ದಕ್ಷಿಣ ವಲಯ’ದ ಮುಖ್ಯ ಎಂಜಿನಿಯರ್ ಆಗಿ ಕೆ.ಸಿ. ಸತೀಶ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಇಲಾಖೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿರುವ ಚೀಫ್ ಎಂಜಿನಿಯರ್ ಸತೀಶ್ ಅವರಿಗೆ ಈಗ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಎಸ್‌ಸಿ ಲಂಬಾಣಿ ಸಮುದಾಯಕ್ಕೆ ಸೇರಿದ ಕೆ.ಸಿ. ಸತೀಶ್ ಅವರ ಈ ನೇಮಕಾತಿ ವ್ಯಾಪಕ ಸ್ವಾಗತಕ್ಕೆ ಪಾತ್ರವಾಗಿದೆ. ಸಾಮಾಜಿಕ ನ್ಯಾಯದಡಿಯಲ್ಲಿ ಅರ್ಹ ಅಧಿಕಾರಿಯನ್ನು ಗುರುತಿಸಿ ಈ ಹುದ್ದೆ ನೀಡಿದ್ದಕ್ಕಾಗಿ ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸತೀಶ್ ಅವರು, ​ಮೈಸೂರು, ಉಡುಪಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಕಾರ್ಯಪಾಲಕ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ​ಬೆಳಗಾವಿಯಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಸರ್ಕಾರದ ಗಮನ ಸೆಳೆದಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments