ಕನ್ನಡದಲ್ಲಿ ‘ಜೋಗುಳ’ ‘ಕನ್ಯಾದಾನ’, ‘ಅನುರಾಗ ಸಂಗಮ, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ.
ಕನ್ನಡದ ಕಿರುತೆರೆಯಲ್ಲಿ ಜನಪ್ರಿಯರಾಗಿ ಬಳಿಕ ತೆಲುಗು ಭಾಷೆಯಲ್ಲೂ ಮಿಂಚಿದ್ದ ನಟಿ ಜ್ಯೋತಿ ರೈ ಈಗ ಕಿಲ್ಲರ್ ಆಗಿದ್ದಾರೆ. ತಮ್ಮ ಹೊಸ ಸಿನಿಮಾದ ಪೋಸ್ಟರ್‌ಅನ್ನು ಅವರು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಪೋಸ್ಟ್‌ಗಳ ಕಾರಣಕ್ಕಾಗಿಯೇ ಸುದ್ದಿಯಲ್ಲಿರುವ ಜ್ಯೋತಿ ರೈ, ಕೈಯಲ್ಲಿ ಕೊಡಲಿ ಹಿಡಿದು ನಿಂತಿರುವ ರಗಡ್ ಲುಕ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು.
ಕಿಲ್ಲರ್‌ನ ಮೊದಲ ಶೆಡ್ಯುಲ್ ಯಶಸ್ವಿಯಾಗಿ ಕಂಪ್ಲೀಟ್ ಆಗಿದೆ. ಇಡೀ ಟೀಮ್‌ನಲ್ಲಿ ಸಖತ್ ಶಕ್ತಿ ತುಂಬಿದೆ. ಈ ಸಿನಿಮಾದ ಎಕ್ಸ್ಪೀರಿಯನ್ಸ್ ಶೀಘ್ರದಲ್ಲೇ ನಿಮಗೆ ತಿಳಿಯಲಿದೆ. ಅದಕ್ಕಾಗಿ ಸರಿಯಾದ ಸಮಯ ಬರಬೇಕಷ್ಟೇ. ಅದ್ಭುತ ಕ್ರಿಯೇಟಿವ್ ವರ್ಕ್ ನಡೆಯುತ್ತಿದೆ ಎಂದು ಜ್ಯೋತಿ ರೈ ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದಷ್ಟು ಬೋಲ್ಡ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಒಂದು ಫೋಟೊದಲ್ಲಿ ಲೂಸ್ ಟೀಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ರೆ, ಮತ್ತೊಂದು ಫೋಟೊದಲ್ಲಿ ನಟಿ ಕ್ರಾಪ್ ಟಾಪ್ ಧರಿಸಿ ಮಾದಕ ಭಂಗಿಯಲ್ಲಿ ಪೋಸ್ ಕೊಟ್ಟಿದ್ದರು.
ಇನ್ನೊಂದು ಫೋಟೋದಲ್ಲಿ ಕಾರ್‌ನಲ್ಲಿ ಕುಳಿತು ಜ್ಯೋತಿ ರೈ ಪೋಸ್ ನೀಡಿದ್ದಾರೆ. ಇದಕ್ಕೆ ಎಂದಿನಂತೆ, ಹಾಟಿ, ಬ್ಯೂಟಿ ಎನ್ನುವ ಕಾಮೆಂಟ್‌ಗಳು ಅವರ ಅಭಿಮಾನಿಗಳಿಂದ ಬಂದಿದೆ.
ಚಡ್ಡಿ, ಮಿಡ್ಡಿ ಧರಿಸಿ ಸಾಮಾನ್ಯವಾಗಿ ಪೋಸ್ ನೀಡುವ ಜ್ಯೋತಿ ರೈ ಸೀರೆಯಲ್ಲೂ ಕೆಲವು ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಅವರ ಅಭಿಮಾನಿಗಳು, ಬ್ಯಾಕ್‌ಲೆಸ್ ಬ್ಲೌಸ್ ನಿಮಗೆ ಬಹಳ ಸುಂದರವಾಗಿ ಕಾಣುತ್ತದೆ ಎಂದು ಬರೆದಿದ್ದಾರೆ.
ಈ ನಡುವೆ ಜ್ಯೋತಿ ರೈ ಕನ್ನಡ ಬಿಗ್ ಬಾಸ್ ಹಾಗೂ ತೆಲುಗು ಬಿಗ್ ಬಾಸ್‌ಗೆ ಹೋಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದೆಲ್ಲವನ್ನೂ ಆಕೆ ತಿರಸ್ಕರಿಸಿದ್ದರು. ಹಾಗಿದ್ದರೂ, ತೆಲುಗು ಬಿಗ್‌ಬಾಸ್‌ಗೆ ಅವರು ವೈಲ್ಡ್ ಕಾರ್ಡ್ ಎಂಟ್ರಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಹಾಟ್ ಫೋಟೊ ಹಂಚಿಕೊಂಡು ನಟಿ ಮತ್ತೆ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲದೇ ತೆಲುಗು ನಿರ್ದೇಶಕ ಸುಕು ಪೂರ್ವಜ್ ಜತೆಗಿನ ಪೋಟೋಗಳನ್ನು ಹಂಚಿಕೊಂಡು ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಜ್ಯೋತಿಪುರ್ವಜ್ ಹ್ಯಾಷ್‌ಟ್ಯಾಗ್ ಹಾಕುತ್ತ ಬರುತ್ತಿದ್ದಾರೆ ಜ್ಯೋತಿ ರೈ. ಇವೆಲ್ಲ ಗಮನಿಸಿದ ನೆಟ್ಟಿಗರು ಇಬ್ಬರ ಮಧ್ಯೆ ಸಂಬಂಧ ಇರೋದು ಗ್ಯಾರೆಂಟಿ ಎನ್ನುತ್ತಿದ್ದಾರೆ.