Thursday, November 20, 2025
19.9 C
Bengaluru
Google search engine
LIVE
ಮನೆ#Exclusive NewsTop Newsಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಜೆ.ವಿ ಗೌಡರ ನಿಧನ

ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಜೆ.ವಿ ಗೌಡರ ನಿಧನ

ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿದ್ದ ಡಾ.ಜೆ ವಿ ಗೌಡ ಇಂದು ಕೊನೆಯುಸಿರೆಳೆದಿದ್ದಾರೆ. 1986 ರಿಂದ 1989 ರ ವರೆಗೆ ಧಾರವಾಡ ಕೃಷಿ ವಿವಿಯ ಮೊದಲ ಕುಲಪತಿಯಾಗಿದ್ದ ಗೌಡ ಅವರು, ವಿಶ್ವವಿದ್ಯಾಲಯವನ್ನು ಬಹು ಎತ್ತರಕ್ಕೆ ಬೆಳೆಸಲು ಪ್ರಯತ್ನಿಸಿ ಯಶಸ್ವಿ ಆಗಿದ್ದರು. ಮಧ್ಯಾಹ್ನದ ನಂತರ ಅಂತ್ಯಕ್ರಿಯೆಗೆ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಗಣ್ಯರು ಸಂತಾಪ ವಯಕ್ತಪಡಿಸಿದ್ದಾರೆ ಜೋಶಿಯವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಡಾ. ಜೆ.ವಿ ಗೌಡರ ನಿಧನ ಸುದ್ದಿ ತೀರ ನೋವಿನ ಸಂಗತಿ. ಡಾ. ಜೆ.ವಿ ಗೌಡರು ಐಎಆರ್‌ಐನಲ್ಲಿ ಭಾರತ ರತ್ನ ದಿವಂಗತ ಡಾ. ಎಮ್.ಎಸ್. ಸ್ವಾಮಿನಾಥನ್‌ರವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪೂರೈಸಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ, ವಿಜ್ಞಾನಿಯಾಗಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 50 ವಿದ್ಯಾರ್ಥಿಗಳು ಎಮ್.ಎಸ್ಸಿ. (ಕೃಷಿ) ಮತ್ತು 25 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಇವರ ಮಾರ್ಗದರ್ಶನದಲ್ಲಿ ಪೂರೈಸಿದ್ದರು.

ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಆಡಳಿತದಲ್ಲಿ ಹಲವು ಸುಧಾರಣೆ ಮತ್ತು ಪಠ್ಯಕ್ರಮಗಳಲ್ಲಿ ಬದಲಾವಣೆ ಮಾಡುವುದರ ಜೊತೆಗೆ 304 ಶಿಕ್ಷಕರು ಮತ್ತು 258 ಶಿಕ್ಷಕೇತರ ಸಿಬ್ಬಂದಿಯನ್ನು ನೇಮಿಸಿ ಕೊಂಡಿದ್ದಾರೆ. ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಸುಧಾರಣೆಗಾಗಿ ರಾಷ್ಟ್ರ ಮಟ್ಟದ 12 ಸಮಿತಿಗಳ ಚೇರಮನ್ ಆಗಿ, 16 ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಡಾ.ಜಗೇನಹಳ್ಳಿ ವಿರುಪನಗೌಡರ ಇಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2-30 ಕ್ಕೆ ಹೊಸ ಬಸ್ ನಿಲ್ದಾಣದ ಹಿಂದೆ ಇರುವ ರುದ್ರಭೂಮಿಯಲ್ಲಿ ನೆರವೇರಲಿದೆ. ಧಾರವಾಡದ ಕೃಷಿ ವಿ ವಿ ಆವರಣದಲ್ಲಿ, ಗೌಡ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಇಂದು ಮುಂಜಾನೆ 11 ರಿಂದ 1-30 ರ ವರೆಗೆ ಅವರ ಅಭಿಮಾನಿಗಳು, ಶಿಷ್ಯರು, ಪಾರ್ಥಿವ ಶರೀರದ ದರ್ಶನ ಪಡೆಯಬಹುದಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments