ಜಿಲ್ಲೆ

ಜೆಸ್ಕಾಂ ನಿರ್ಲಕ್ಷ್ಯ, ಜೀವಭಯದಲ್ಲೆ ಸಾರ್ವಜನಿಕರ ಓಡಾಟ

ಬೀದರ್ : ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಜೀವ ಭಯದಲ್ಲೆ ಓಡಾಟಬೇಕಾದ ಅನಿವಾರ್ಯತೆ ಎದುರಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲೇ ಜೆಸ್ಕಾಂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಅದಿಕಾರಿಗಳು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಎಸ್ ಗಡಿ ಜಿಲ್ಲೆ ಬೀದರ್‌‌ನ ನಗರ ಪ್ರದೇಶದಲ್ಲಿ ಜೆಸ್ಕಾಂ ಅದಿಕಾರಿಗಳ ದಿವ್ಯ ನಿರ್ಲಕ್ಷ್ಯ ಮುಂದಿವರೆದಿದ್ದು, ಸಾರ್ವಜನಿಕರ ಜೀವದ ಚೆಲ್ಲಾಟ ಆಡ್ತಿದ್ದಾರೆ. ನಗರದ ಅಂಬೇಡ್ಕರ ಕಾಲೋನಿಯಲ್ಲಿರುವ ಟ್ರಾನ್ಸ್‌ಪಾರ್ಮರ್‌ಗೆ ಯಾವುದೇ ಭದ್ರತಾ ಕ್ರಮ ಕೈಗೊಳ್ಳದೇ ಹಾಗೆಯೆ ಬಿಟ್ಡಿದ್ದಾರೆ. ಹಾರೋಗೆರಿ ರಸ್ತೆಯ ಅಂಬೇಡ್ಕರ ಕಾಲೋನಿಯಲ್ಲಿ ಅಳವಡಿಸಲಾಗಿರುವ ಟ್ರಾನ್ಸ್‌ಪಾರ್ಮರ್‌ಗೆ ಯಾವುದೇ ಭದ್ರತೆಯನ್ನ‌ ಕೈಗೊಂಡಿಲ್ಲಾ. ಮುಖ್ಯ ರಸ್ತೆಯಲ್ಲೆ ಟ್ರಾನ್ಸ್‌ಪಾರ್ಮರ್ ಇರೋದರಿಂದ ಆ ರಸ್ತೆ ಮಾರ್ಗವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡಸುತ್ತಾರೆ. ಹೈ ವೋಲ್ಟೆಜ್ ವಿದ್ಯುತ್ ಇರುವದರಿಂದ ಯಾವುದೇ ಸಮಯದಲ್ಲಿ ಅಪಘಾತಗಳು ಸಂಭವಿಸಬಹುದು. ವಿದ್ಯುತ್ ಅವಘಡದಿಂದ ಏಷ್ಟೊಂದು ದೊಡ್ಡ ದುರಂತಗಳು ನಡೆಯಬಹುದು ಎಂಬುದನ್ನ ಅರಿತಿದ್ದರೂ ಜೆಸ್ಕಾಂ ಅಧಿಕಾರಿಗಳು ದಿವ್ಯ ನಿರ್ಲಕ್ಷ ವಹಿಸಿದ್ದಕ್ಕೆ ಸ್ಥಳೀಯರು ಕಿಡಿಕಾರುತ್ತಿದ್ದಾರೆ.

ಅಷ್ಟೇ ಅಲ್ಲದೆ ನಗರದ ಭೀಮ ನಗರದಲ್ಲಿರುವ ನಾಡ ಕಚೇರಿಯಲ್ಲೂ ಸಹ ಇದೇ ನಿರ್ಲಕ್ಷ್ಯ ಮುಂದಿವರೆದಿದ್ದು, ನಾಡ ಕಚೇರಿಗೆ ಆಗಮಿಸುವವರೂ ಸದಾ ಜೀವ ಭಯದಲ್ಲೆ ಬರುವ ಸ್ಥಿಯಿ ನಿರ್ಮಾಣವಾಗಿದೆ. ಬೀದರ್ ಉತ್ತರ ಹಾಗೂ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಬರುವಂತಹ ಅರ್ಜಿಗಳನ್ನ ತೆಗೆದುಕೊಳ್ಲುವ ಕಚೆರಿ ಇದಾಗಿದ್ದು, ಈ ನಾಡ ಕಚೇರಿಗೆ ದಿನನಿತ್ಯ ಸಾವಿರಾರು ಬರ್ತಾರೆ. ನಾಡ ಕಚೇರಿಗೆ ವಿದ್ಯುತ್ ಕಂಬದಿಂದ ತೆಗೆದುಕೊಳ್ಳಲಾದ ವಿದ್ವತ್ ಲೈನ್ ಅನ್ಮೂ ಗೋಡೆಯ ಪಕ್ಕದಲ್ಲೆ ಹಾಗೆ ಬಿಟ್ಡಿದ್ಸಾರೆ. ಅದೂ ಕೂಡಾ ನೆಲಕ್ಕೆ ತಾಗುವಂತಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ಕೆಲಸಗಳಿಗೆ ಸಾವಿರಾರು ಜನ ಬರ್ತಾರೆ. ಆದ್ರೆ ಬರುವ ಜನರು ಆತಂಕದಲ್ಲೆ ತಮ್ಮ‌ಕೆಲಸ ಮಾಡಿಕೊಳ್ಳುವಂತ ಅನಿವಾರ್ಯತೆ ಎದುರಾಗಿದೆ. ಇತ್ತೀಚೆಗಷ್ಟೇ ಮನ್ನಳ್ಳಿ ಗ್ರಾಮದಲ್ಲಿ ಇಬ್ಬರು ದಂಪತಿಗಳು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದರು. ಆ ಕಹಿ ಮಾಸುವ ಮುನ್ನವೇ ಮತ್ತೊಂದು ಅಪಘಾತಗಳು ಆಗುವ ಮುನ್ನ ಜೆಸ್ಕಾಂ ಅದಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

ಒಟ್ನಲ್ಲಿ‌ ನಗರದಲ್ಲಿ ಜೆಸ್ಕಾಂ ಅದಿಕಾರಿಗಳ ದಿವ್ಯ ‌ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಆದಷ್ಟು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಂಡ ಮುಂದೆ ಆಗಬಹುದಾದ ಅವಘಡಗಳನ್ನ ತಪ್ಪಿಸುವ ಕೆಲಸಕ್ಕೆ ಜೆಸ್ಕಾಂ ಅಧಿಕಾರಿಗಳು ಮುಂದಾಗಬೇಕು ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ.

Comments (0)

Your email address will not be published. Required fields are marked *

Back to top button