
ಬೆಂಗಳೂರು: ಕುಮಾರಸ್ವಾಮಿ ಶಾಲು ಧರಿಸಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.ಎಲೆಕ್ಷನ್ನಲ್ಲಿ ಜೆಡಿಎಸ್-ಬಿಜೆಪಿಗೆ ಬೇಸ್ ಇಲ್ಲ ಅವ್ರು ಇವ್ರನ್ನ ನುಂಗ್ತಾರೋ, ಇವ್ರು ಅವ್ರನ್ನ ನುಂಗ್ತಾರೋ ನೋಡೋಣ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
ಹೆಚ್ಡಿ ಕುಮಾರಸ್ವಾಮಿ ಅವ್ರು ಜೆಡಿಎಸ್ ಅನ್ನು ಆಲ್ ಮೋಸ್ಟ್ ಬಿಜೆಪಿ ಜೊತೆ ಮರ್ಜ್ ಮಾಡಿದ್ದಾರೆ. ಅವರ ಪಾರ್ಟಿ ವಿಚಾರ ಅವರು ಏನು ಬೇಕಾದರು ಮಾಡಿಕೊಳ್ಳಲಿ. ಅದಕ್ಕೆ ನಮಗೆ ಏನು ಸಂಬಂಧವಿಲ್ಲ. ಮಂಡ್ಯದಲ್ಲಿ ಅವರ ಪಕ್ಷಕ್ಕೆ ಬೇಸ್ ಇಲ್ಲ. ಕೇಸರಿ ಶಾಲು ಆದ್ರೂ ಹಾಕಿಕೊಳ್ಳಲಿ, ಯಾವ ಬಣ್ಣದ ಬಾವುಟ ಬೇಕಾದರೂ ಹಾಕಿಕೊಳ್ಳಲಿ ಅಲ್ಲಿ ಬಿಜೆಪಿ, ಜೆಡಿಎಸ್ನ ಬೇಸ್ ಇಲ್ಲ. ಅವ್ರು ಇವ್ರನ್ನ ನುಂಗ್ತಾರೋ, ಇವ್ರು ಅವ್ರನ್ನ ನುಂಗ್ತಾರೋ ನೋಡೋಣ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಬಹಳ ತೊಂದರೆ ಮಾಡ್ತಿದ್ದಾರೆ. ರಾಷ್ಟ್ರಧ್ವಜ, ಕನ್ನಡ ಧ್ವಜ ಬಿಟ್ಟು ಬೇರೆ ಯಾವುದೂ ಹಾರಿಸಲ್ಲ ಅಂತಾ ಮುಚ್ಚಳಿಕೆ ಕೊಟ್ಟಿದ್ರು. ಶಾಂತಿ ಕದಡಲು ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಜನರು ಇದನ್ನ ಗಂಭೀರವಾಗಿ ನೋಡ್ತಿದ್ದಾರೆ. ಕೇಂದ್ರದಲ್ಲಿ ತಿರಂಗಾ ಬಿಟ್ಟು ಹನುಮ ಧ್ವಜಾನೇ ಹಾರಿಸಿಬಿಡಿ ಎಂದು ಡಿಸಿಎಂ ವಾಗ್ದಾಳಿ ನಡೆಸಿದರು.




