#Exclusive NewsTop Newsರಾಜಕೀಯಸುದ್ದಿ

ಜಮೀರ್​ ಅಹ್ಮದ್​ ಸೂಪರ್​ ಸಿಎಂ ತರ ವರ್ತಿಸುತ್ತದ್ದಾರೆ : ಎಂ.ಪಿ.ರೇಣುಕಾಚಾರ್ಯ

 

 ದಾವಣಗೆರೆ: ಸೂಪರ್‌ ಸಿಎಂರಂತೆ ವರ್ತಿಸುತ್ತಿರುವ ವಕ್ಫ್​ ಸಚಿವ ಜಮೀರ್‌ಗೆ ಕಡಿವಾಣ ಹಾಕಿ ಎಂದು ಮಾಜಿ ಸಚಿವ, ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಮೀರ್ ವಕ್ಫ್​ ಮಂಡಳಿಗೆ ಹಿಂದುಗಳಿಗೆ ಸೇರಿದ ಜಮೀನು, ಮಠಗಳು, ದೇವಸ್ಥಾನ, ಪರಿಶಿಷ್ಟರು, ಹಿಂದುಳಿದವರ ಜಮೀನು ಸ್ವಾಧೀನಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಇವತ್ತು ರೈತರು, ಮಠ, ಮಂದಿರಗಳ   ಆಸ್ತಿಗಳನ್ನು  ವಕ್ಫ್​  ಆಸ್ತಿ  ಅಂತಾ ಘೋಷಿಸಿದವರು ನಾಳೆ ವಿಧಾನಸೌಧವನ್ನೂವಕ್ಫ್​ ಆಸ್ತಿ ಎಂದು ಘೋಷಿಸಬಹುದು ಎಂದರು. ರೈತರು, ಮಠಗಳಿಗೆ ರಾಜ್ಯ ಸರ್ಕಾರ ವಕ್ಫ್​ ಮಂಡಳಿಯಿಂದ ಜಾರಿಗೊಳಿಸಿದ ನೋಟಿಸ್‌ ಮಾತ್ರವಲ್ಲದೇ, ಆರ್‌ಟಿಸಿ ಕಾಲಂ 11ರಲ್ಲಿ ನಮೂದಿಸಿದ ವಕ್ಫ್​ ಹೆಸರನ್ನೂ ಸಂಪೂರ್ಣ ರದ್ದುಪಡಿಸಬೇಕು. ಪಹಣಿಯ ಕಾಲಂ 11ರಲ್ಲಿ ವಕ್ಫ್​ ಆಸ್ತಿ ಎಂಬುದಾಗಿ ನಮೂದು ಮಾಡಿದ ನಂತರ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ, ಸರ್ಕಾರವು ವಕ್ಫ್​ ಮಂಡಳಿಯನ್ನೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

Comments (0)

Your email address will not be published. Required fields are marked *

Back to top button